Download Our App

Follow us

Home » ಅಪರಾಧ » ಚನ್ನಗಿರಿ ಪೊಲೀಸ್ ಠಾಣೆಗೆ ನುಗ್ಗಿದ ಪ್ರಕರಣ : 20ಕ್ಕೂ ಹೆಚ್ಚು ಮಂದಿ ವಶಕ್ಕೆ..!

ಚನ್ನಗಿರಿ ಪೊಲೀಸ್ ಠಾಣೆಗೆ ನುಗ್ಗಿದ ಪ್ರಕರಣ : 20ಕ್ಕೂ ಹೆಚ್ಚು ಮಂದಿ ವಶಕ್ಕೆ..!

ದಾವಣಗೆರೆ : ಚನ್ನಗಿರಿ ಪೊಲೀಸ್ ಠಾಣೆಗೆ ನುಗ್ಗಿದ ಕಿಡಿಗೇಡಿಗಳನ್ನು ಬಂಧಿಸಲು ಶುರುಮಾಡಿದ್ದಾರೆ. ಚನ್ನಗಿರಿ ಪೊಲೀಸರು ಈಗಾಗಲೇ 20ಕ್ಕೂ ಹೆಚ್ಚು ಮಂದಿ ವಶಕ್ಕೆ ಪಡೆದಿದ್ದಾರೆ. ಪೊಲೀಸ್​ ಠಾಣೆ ಮೇಲೆ ಕಲ್ಲು ತೂರಾಟ, ವಾಹನ ಧ್ವಂಸ ಪ್ರಕರಣ ಸಂಬಂಧ ಸಿಸಿ ಕ್ಯಾಮರಾ, ಮೊಬೈಲ್ ವಿಡಿಯೋ ಅಧರಿಸಿ ಕಿಡಿಗೇಡಿಗಳು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ನಂತರ ಮೆಡಿಕಲ್​ ಟೆಸ್ಟ್ ಮಾಡಿಸಿ ಕೋರ್ಟ್​ಗೆ ಹಾಜರುಪಡಿಸಿದ್ದು, ನಿನ್ನೆ ರಾತ್ರಿಯಿಂದಲೇ ಪೊಲೀಸರು ಕಿಡಿಗೇಡಿಗಳ ಹುಡುಕಾಟ ನಡೆಸಿದ್ದಾರೆ. 150ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಿ 20ಕ್ಕೂ ಹೆಚ್ಚು ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ SP ಉಮಾ ಪ್ರಶಾಂತ್ ಅವರು ಐದು ಟೀಮ್ ಮಾಡಿದ್ದಾರೆ. ಕಲ್ಲು ತೂರಾಟ ಪ್ರಕರಣದಲ್ಲಿ 11 ಮಂದಿ ಪೊಲೀಸರು ಗಾಯಗೊಂಡಿದ್ದರು.

ಪೊಲೀಸ್ ಕಸ್ಟಡಿಯಲ್ಲಿದ್ದ ಅಧೀಲ್​​ ಎಂಬಾತ ಸಾವನ್ನಪ್ಪಿದ್ದ ಹಿನ್ನೆಲೆ ಠಾಣೆ ಮುಂದೆ ಶವ ಇಟ್ಟು ಲಾಕಪ್​ಡೆತ್​ ಆರೋಪ ಹೊರಿಸಿ ಪ್ರತಿಭಟಿಸಲಾಗಿತ್ತು. ಹೋರಾಟಗಾರರು ಠಾಣೆಗೆ ಕಲ್ಲು ತೂರಿ, ವಾಹನಗಳನ್ನು ಜಖಂ ಮಾಡಿದ್ದರು.

ಘಟನೆಯ ಹಿನ್ನೆಲೆ : ಶುಕ್ರವಾರ (ಮೇ 24) ಸಂಜೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸರು, ಆದಿಲ್ ಎಂಬಾತನನ್ನ ವಶಕ್ಕೆ ಪಡೆದಿದ್ದರು. ಚನ್ನಗಿರಿಯ ಟಿಪ್ಪು ನಗರ ನಿವಾಸಿಯಾಗಿದ್ದ ಆದಿಲ್, ಮಟ್ಕಾ ಆಡಿಸುತ್ತಿದ್ದ ಆರೋಪ ಎದುರಿಸುತ್ತಿದ್ದ. ಹೀಗಾಗಿ ಸಂಜೆ ಠಾಣೆಗೆ ಕರೆತಂದ ಪೊಲೀಸರು ತನಿಖೆಗೆ ಒಳಪಡಿಸಿದ್ದರು. ಆದರೆ ಠಾಣೆಗೆ ಬರ್ತಿದ್ದಂತೆ ಬಿಪಿ ಲೋ ಆಗಿದೆಯಂತೆ. ಕೂಡಲೇ ಆತನನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸಿದೆ ಆದಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಆದಿಲ್‌ ಸಾವಿನ ವಿಷಯ ಗೊತ್ತಾಗುತ್ತಿದ್ದಂತೆ ಆತನ ಕುಟುಂಬಸ್ಥರು ಪೊಲೀಸರೇ ಚಿತ್ರಹಿಂಸೆ ನೀಡಿ, ಹೊಡೆದು ಸಾಯಿಸಿದ್ದಾರೆ ಎಂದು ಠಾಣೆಯ ಮುಂದೆ ಬಂದು ಆಕ್ರೋಶ ಹೊರಹಕಿದ್ದಾರೆ. ಶುಕ್ರವಾರ ರಾತ್ರಿ ಈ ವಿಷಯ ಎಲ್ಲೆಡೆ ಹಬ್ಬುತಿದ್ದಂತೆ ರೊಚ್ಚಿಗೆದ್ದ ಆದಿಲ್ ಕಡೆಯವರು ಠಾಣೆಗೆ ನೂರಾರು ಸಂಖ್ಯೆಯಲ್ಲಿ ನುಗ್ಗಿ ಬಂದಿದ್ದಾರೆ. ಕೈಗೆ ಸಿಕ್ಕ ಸಿಕ್ಕವನ್ನೆಲ್ಲ ಎಸೆದು ಇಡೀ ಠಾಣೆಯನ್ನ, 10ಕ್ಕೂ ಹೆಚ್ಚು ಪೊಲೀಸ್ ವಾಹವನ್ನು ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ 11 ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.

ಇದನ್ನೂ ಓದಿ : ದೆಹಲಿಯ ಬೇಬಿ ಕೇರ್​ ಸೆಂಟರ್​ನಲ್ಲಿ ಭಾರೀ ಅಗ್ನಿ ದುರಂತ – 7 ನವಜಾತ ಶಿಶುಗಳು ಸಾ*ವು..!

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ಮತ್ತೊಂದು ಸಂಕಷ್ಟ – ಪ್ರೊಡ್ಯೂಸರ್ ಭರತ್​​​ಗೆ ಬೆದರಿಕೆ ಹಾಕಿದ್ದ ಕೇಸ್​ಗೆ ಮರುಜೀವ.. NCR ದಾಖಲು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್​ ಪ್ರೊಡ್ಯೂಸರ್ ಭರತ್​ಗೆ ಬೆದರಿಕೆ ಹಾಕಿದ್ದ

Live Cricket

Add Your Heading Text Here