Download Our App

Follow us

Home » ಸಿನಿಮಾ » ಕೆ.ಆರ್.ಜಿ ಕನೆಕ್ಟ್ಸ್​​ಗೆ 4 ವರ್ಷಗಳ ಸಂಭ್ರಮ – ಹೊಸ ಲೋಗೋ ರಿಲೀಸ್..!

ಕೆ.ಆರ್.ಜಿ ಕನೆಕ್ಟ್ಸ್​​ಗೆ 4 ವರ್ಷಗಳ ಸಂಭ್ರಮ – ಹೊಸ ಲೋಗೋ ರಿಲೀಸ್..!

ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಯಾದ ಕೆ.ಆರ್.ಜಿ ಸ್ಟೂಡಿಯೋಸ್​​ನ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕಗಳ ಸಂಸ್ಥೆಯಾದ ಕೆ.ಆರ್.ಜಿ. ಕನೆಕ್ಟ್ಸ್‌ ಆರಂಭಗೊಂಡು ಇಂದಿಗೆ 4 ವರ್ಷವಾಗಿದೆ. ಈ ಅಂಗವಾಗಿ‌‌ “ಕನೆಕ್ಟ್ಸ್” ತನ್ನ ಹೊಸ ಲೋಗೋವನ್ನು ರಿಲೀಸ್ ಮಾಡಿದೆ.

2020ರಲ್ಲಿ‌ ಆರಂಭಗೊಂಡ “ಕನೆಕ್ಟ್ಸ್” ಹಲವಾರು ಚಿತ್ರಗಳನ್ನು ಮಾರ್ಕೆಟಿಂಗ್ ಮಾಡಿ,‌ ತನ್ನದೇ ಆದ ಛಾಪನ್ನು ಮೂಡಿಸಿದೆ. “Act 1978” ಚಿತ್ರದಿಂದ ಆರಂಭಗೊಂಡ ಮಾರ್ಕೆಟಿಂಗ್ ಪಯಣ, ಹೊಸ ಆವಿಷ್ಕಾರಗಳೊಡನೆ ಇಂದಿಗೂ ಸಾಗುತ್ತಿದೆ. “ಕನೆಕ್ಟ್ಸ್” ಮಾರ್ಕೆಟಿಂಗ್ ಮಾಡಿದ ಬ್ಲಾಕ್ ಬಸ್ಟರ್ ಚಿತ್ರಗಳಾದ “ಕೆ.ಜಿ.ಎಫ್”, “ಯುವರತ್ನ”, “ಕಾಂತಾರ”, “ಬಡವ ರಾಸ್ಕಲ್”, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಅಭೂತಪೂರ್ವ ಹೆಸರನ್ನು ಗಳಿಸಿದೆ‌.

ಕನ್ನಡ ಚಿತ್ರರಂಗದದಲ್ಲಿ‌ ಮಾರ್ಕೆಟಿಂಗ್ ಕೌಶಲ್ಯವನ್ನು, ತಂತ್ರಗಳನ್ನು ರೂಪಿಸುವಲ್ಲಿ “ಕನೆಕ್ಟ್ಸ್” ವಿಶಿಷ್ಟ ಹೆಸರನ್ನು ಗಳಿಸಿದೆ‌. ಅಷ್ಟೇ ಅಲ್ಲದೆ, ವಿಭಿನ್ನವಾದ ಸಹಯೋಗಗಳ ಮೂಲಕ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು‌ ಸಾಧಿಸಿದೆ. ಹೆಸರಾಂತ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವಾದ ಡ್ರೆಸ್ಸಿಂಗ್ ರೂಮ್ ಶೋನೊಂದಿಗೆ(ಡಿ.ಆರ್.ಎಸ್) ಒಂದು ವಿಶೇಷವಾದ ಸಹಯೋಗಕ್ಕೆ ಮುಂದಾಗಿದೆ. ಕೆ.ಆರ್.ಜಿ.ಸ್ಟೂಡಿಯೋಸ್​​ನ ಮುಂಬರುವ “ಪೌಡರ್” ಚಿತ್ರಕ್ಕಾಗಿ, ಮಾರ್ಕೆಟಿಂಗ್ ತಂಡ 1522-ದಿ‌ ಪಬ್‌ ಜೊತೆಗೆ ಸಹಯೋಗಕ್ಕೆ ಕೈ ಜೋಡಿಸಿದೆ.

ಕೆ.ಆರ್.ಜಿ.‌ಕನೆಕ್ಟ್ಸ್ ನ ವಿಭಿನ್ನ ಮಾರ್ಕೆಟಿಂಗ್ ಯೋಜನೆಗಳಿಗೆ ಸಾಥ್ ನೀಡುವುದು ಅದರ ಕ್ರಿಯೇಟಿವ್ ತಂಡ. ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಈ ತಂಡ ತನ್ನ ವಿಭಿನ್ನವಾದ “ಕ್ಯಾರೆಕ್ಟರ್ ಪೋಸ್ಟರ್” ಗಳ ಮೂಲಕ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ : ನನ್ನ ಸರ್ವ ನಾಶ ಮಾಡೋದೇ ಹೆಚ್​ಡಿಡಿ ಫ್ಯಾಮಿಲಿ ಉದ್ದೇಶ – ಡಿಸಿಎಂ ಡಿಕೆಶಿ ಕಿಡಿ..!

Leave a Comment

DG Ad

RELATED LATEST NEWS

Top Headlines

ಗೌರಿ ಹಬ್ಬದಂದು ಗಣೇಶನ ಸನ್ನಿಧಿಯಲ್ಲಿ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರಕ್ಕೆ ಚಾಲನೆ..!

“ಬನಾರಸ್” ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಈ ವರ್ಷದ ಭರ್ಜರಿ ಹಿಟ್ “ಉಪಾಧ್ಯಕ್ಷ” ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರದ

Live Cricket

Add Your Heading Text Here