ಬೆಂಗಳೂರು : ತೀವ್ರ ವಿರೋಧದ ನಡುವೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡಲು ನಿನ್ನೆ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಇತ್ತ ಈ ಸಂಬಂಧ ಡಿಕೆಶಿ-ಹೆಚ್ಡಿಕೆ ನಡುವೆ ದಂಗಲ್ ಮುಂದುವರೆದಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾವೇ ರಾಮನಗರದವರು ಅವರು ಹಾಸನದಿಂದ ಬಂದವರು. ಇಲ್ಲೇ ನಾನು ಜಿಲ್ಲಾ ಪಂಚಾಯ್ತಿ ಮೆಂಬರ್ ಆಗಿದ್ದೆ, ಕುಮಾರಸ್ವಾಮಿ, ದೇವೇಗೌಡರು ಹಾಸನದಿಂದ ಬಂದವರು. ನಾವು ಬೆಂಗಳೂರಿನವರು ಇಲ್ಲಿನವರು, ಅವರು ರಾಜಕೀಯ ಲಾಭಕ್ಕಾಗಿ ಡಿವೈಡ್ ಮಾಡಿದ್ರು ಎಂದಿದ್ದಾರೆ.
ಹೆಚ್ಡಿಡಿ ಫ್ಯಾಮಿಲಿ ಮೇಲೆ ಡಿಕೆಶಿ ಗರಂ ಆಗಿ, ನನ್ನ ಸರ್ವ ನಾಶ ಮಾಡೋದೇ ಅವರ ಉದ್ದೇಶ, ರಾಮನಗರವೂ ನಮ್ಮದೇ ಮಾಗಡಿಯೂ ನಮ್ಮದೇ. ಬೆಂಗಳೂರಿಗೆ ಬ್ರ್ಯಾಂಡ್ ಇದೆ, ನಾವ್ಯಾಕೆ ಆ ಬ್ರ್ಯಾಂಡ್ ಬಿಡಬೇಕು ಎಂದು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಹೆಸರು ಇಡೋದಕ್ಕೆ ನಿಖಿಲ್ ವಿರೋಧ : ಈ ಸಂಬಂಧ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಬೆಂಗಳೂರು ದಕ್ಷಿಣ ಎಂದಾಕ್ಷಣ ರಾಮನಗರ ಭೂಮಿ ಚಿನ್ನ ಆಗಲ್ಲ, ರಾಮನಗರಕ್ಕೆ ಒಂದು ಅಸ್ಮಿತೆ ಇದೆ, ಅದನ್ನು ಉಳಿಸಬೇಕು. ರಾಮನ ಹೆಸರನ್ನು ಬದಲಾವಣೆ ಮಾಡೋದು ಸರಿಯಲ್ಲ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆ ಮಾಡಿದ್ದು ಹೆಚ್ಡಿಕೆ,
ಅವರೇ ನಾಳೆ ಮೀಟಿಂಗ್ ಮಾಡಿ ಹೋರಾಟದ ನಿರ್ಧಾರ ಕೈಗೊಳ್ತಾರೆ ಎಂದಿದ್ದಾರೆ.
ಇದನ್ನೂ ಓದಿ : ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್..!