Download Our App

Follow us

Home » ಅಪರಾಧ » ನಟ ದರ್ಶನ್​ಗೆ ಜೈಲೂಟವೇ ಗತಿ – ಮನೆ ಊಟಕ್ಕಾಗಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್​..!

ನಟ ದರ್ಶನ್​ಗೆ ಜೈಲೂಟವೇ ಗತಿ – ಮನೆ ಊಟಕ್ಕಾಗಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್​..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್​​ ಮನೆ ಊಟಕ್ಕಾಗಿ ಅರ್ಜಿ ಸಲ್ಲಿದ್ದರು. ಆದರೆ ಇದೀಗ ಮನೆ ಊಟಕ್ಕಾಗಿ ದರ್ಶನ್ ಸಲ್ಲಿಸಿದ ಅರ್ಜಿ ವಜಾಗೊಳಿಸಿ 24 ನೇ ACMM ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮೂಲಕ ಮನೆ ಊಟ ಸೌಲಭ್ಯ ಪಡೆಯುವ ನಿರೀಕ್ಷೆಯಲ್ಲಿದ್ದ ದರ್ಶನ್​​ಗೆ ಬಿಗ್​​ ಶಾಕ್ ಎದುರಾಗಿದೆ.

ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್​​ ಮನೆ ಊಟ, ಹಾಸಿಗೆ, ಪುಸ್ತಕ ಪೇಪರ್ ಬೇಕು ಅಂತ ಅರ್ಜಿ ಸಲ್ಲಿಸಿರು. ಈ ಬಗ್ಗೆ ಕೋರ್ಟ್​ನಲ್ಲಿ ಎರಡು ಬಾರಿ ವಿಚಾರಣೆ ಆದರೂ ತೀರ್ಪು ಇಂದಿಗೆ ಕಾಯ್ದಿರಿಸಲಾಗಿತ್ತು. ಆದರೆ ಇದೀಗ 24ನೇ ಎಸಿಎಂಎಂ ಕೋರ್ಟ್​ ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದೆ.

ನಟ ದರ್ಶನ್​ಗೆ ಯಾವುದೇ ವಿಶೇಷ ಸೌಲಭ್ಯ ಇಲ್ಲ. ಸಾಮಾನ್ಯ ಖೈದಿಗಳಿಗೆ ನೀಡುವ ಊಟವೇ ದರ್ಶನ್​ಗೂ ಸಿಗುತ್ತೆ ಎಂದು ತಿಳಿಸಿದೆ. ಈ ಮೂಲಕ ದರ್ಶನ್​ಗೆ ಇನ್ಮುಂದೆ ಬಿರಿಯಾನಿನೂ ಇಲ್ಲ ಕಾಲ್ ಸೂಪ್​ ಕೂಡ ಇಲ್ಲ. ಜೈಲಿನ ರಾಗಿ ಮುದ್ದೆ, ಅನ್ನ ಸಾಂಬರಯೇ ಗತಿ.

ಇದನ್ನೂ ಓದಿ : ಚಿತ್ರದುರ್ಗದ ಸರಕಾರಿ ಆಸ್ಪತ್ರೆ ವೈದ್ಯ ಲಂಚ ಪಡೆದ ಕೇಸ್​​ – ಡಾ. ಸಾಲಿ‌ ಮಂಜಪ್ಪ ವಿರುದ್ಧ ಭುಗಿಲೆದ್ದ ಆಕ್ರೋಶ..!

Leave a Comment

DG Ad

RELATED LATEST NEWS

Top Headlines

ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ – ಅಪರಿಚಿತ ಟ್ರಕ್ ಚಾಲಕನ ವಿರುದ್ದ ಹಿಟ್ & ರನ್ ಕೇಸ್ ದಾಖಲು!

ಬೆಂಗಳೂರು : ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ನಿನ್ನೆ ಅಪಘಾತಕ್ಕೀಡಾಗಿದ್ದು, ಸದ್ಯ ಸಚಿವೆ

Live Cricket

Add Your Heading Text Here