ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಮನೆ ಊಟಕ್ಕಾಗಿ ಅರ್ಜಿ ಸಲ್ಲಿದ್ದರು. ಆದರೆ ಇದೀಗ ಮನೆ ಊಟಕ್ಕಾಗಿ ದರ್ಶನ್ ಸಲ್ಲಿಸಿದ ಅರ್ಜಿ ವಜಾಗೊಳಿಸಿ 24 ನೇ ACMM ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮೂಲಕ ಮನೆ ಊಟ ಸೌಲಭ್ಯ ಪಡೆಯುವ ನಿರೀಕ್ಷೆಯಲ್ಲಿದ್ದ ದರ್ಶನ್ಗೆ ಬಿಗ್ ಶಾಕ್ ಎದುರಾಗಿದೆ.
ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಮನೆ ಊಟ, ಹಾಸಿಗೆ, ಪುಸ್ತಕ ಪೇಪರ್ ಬೇಕು ಅಂತ ಅರ್ಜಿ ಸಲ್ಲಿಸಿರು. ಈ ಬಗ್ಗೆ ಕೋರ್ಟ್ನಲ್ಲಿ ಎರಡು ಬಾರಿ ವಿಚಾರಣೆ ಆದರೂ ತೀರ್ಪು ಇಂದಿಗೆ ಕಾಯ್ದಿರಿಸಲಾಗಿತ್ತು. ಆದರೆ ಇದೀಗ 24ನೇ ಎಸಿಎಂಎಂ ಕೋರ್ಟ್ ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದೆ.
ನಟ ದರ್ಶನ್ಗೆ ಯಾವುದೇ ವಿಶೇಷ ಸೌಲಭ್ಯ ಇಲ್ಲ. ಸಾಮಾನ್ಯ ಖೈದಿಗಳಿಗೆ ನೀಡುವ ಊಟವೇ ದರ್ಶನ್ಗೂ ಸಿಗುತ್ತೆ ಎಂದು ತಿಳಿಸಿದೆ. ಈ ಮೂಲಕ ದರ್ಶನ್ಗೆ ಇನ್ಮುಂದೆ ಬಿರಿಯಾನಿನೂ ಇಲ್ಲ ಕಾಲ್ ಸೂಪ್ ಕೂಡ ಇಲ್ಲ. ಜೈಲಿನ ರಾಗಿ ಮುದ್ದೆ, ಅನ್ನ ಸಾಂಬರಯೇ ಗತಿ.
ಇದನ್ನೂ ಓದಿ : ಚಿತ್ರದುರ್ಗದ ಸರಕಾರಿ ಆಸ್ಪತ್ರೆ ವೈದ್ಯ ಲಂಚ ಪಡೆದ ಕೇಸ್ – ಡಾ. ಸಾಲಿ ಮಂಜಪ್ಪ ವಿರುದ್ಧ ಭುಗಿಲೆದ್ದ ಆಕ್ರೋಶ..!