ಚಿತ್ರದುರ್ಗ : ವ್ಯಕ್ತಿಯೊಬ್ಬನ ಆಪರೇಷನ್ಗೆ ಚಿತ್ರದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಡಾ. ಸಾಲಿ ಮಂಜಪ್ಪ ಲಂಚ ಪಡೆದ ಘಟನೆಯೊಂದು ನಡೆದಿತ್ತು. ಈ ಕುರಿತು ಬಿಟಿವಿ ಕನ್ನಡ ಲಂಚಾವತಾರದ ವಿಡಿಯೋ ಸುದ್ದಿಯನ್ನು ಪ್ರಸಾರ ಮಾಡಿತ್ತು.
ಇದೀಗ ಸರಕಾರಿ ಆಸ್ಪತ್ರೆಯ ವೈದ್ಯ ಲಂಚ ಪಡೆದ ಘಟನೆಗೆ ಸಂಬಂಧಿಸಿದಂತೆ ಡಾ. ಸಾಲಿ ಮಂಜಪ್ಪ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟನೆ ನಡೆಸುತ್ತಿರುವ ದಲಿತಪರ ಹಾಗೂ ಕರುನಾಡ ವಿಜಯಸೇನೆ ಸಂಘಟನೆಗಳು ಜಿಲ್ಲಾಸ್ಪತ್ರೆಯಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ಕೈಗೊಂಡಿದ್ದು, ಬಡವರ ರಕ್ತ ಹೀರುವ ವೈದ್ಯನಿಗೆ ರಕ್ತದ ಕುಡಿಕೆ ನೀಡಿ ಆಕ್ರೋಶ ಹೊರಹಾಕಿದೆ.
ಇನ್ನು ಜಿಲ್ಲಾ ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಪ್ರತಿಭಟನಾಕಾರರು, ತಲೆಯ ಮೇಲೆ ರಕ್ತದ ಮಡಕೆ ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಲಂಚಕೋರ ವೈದ್ಯರನ್ನು ಕೂಡಲೇ ಅಮನತ್ತು ಮಾಡಲು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ‘ಕುಬುಸ’ ಚಿತ್ರದ ಟ್ರೈಲರ್ ರಿಲೀಸ್ – ಚಿತ್ರತಂಡಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸಾಥ್..!