Download Our App

Follow us

Home » ಮೆಟ್ರೋ » ಬೆಂಗಳೂರು : ಮಹಿಳಾ ಪೊಲೀಸ್ ಮೊಬೈಲ್ ಕಳ್ಳನ ಹಿಡಿದ ಪ್ರಕರಣಕ್ಕೆ ತಿರುವು, ಘಟನೆಯ ಹಿಂದಿದೆ ಲವ್ ಕಹಾನಿ..!

ಬೆಂಗಳೂರು : ಮಹಿಳಾ ಪೊಲೀಸ್ ಮೊಬೈಲ್ ಕಳ್ಳನ ಹಿಡಿದ ಪ್ರಕರಣಕ್ಕೆ ತಿರುವು, ಘಟನೆಯ ಹಿಂದಿದೆ ಲವ್ ಕಹಾನಿ..!

ಬೆಂಗಳೂರು : ಮಹಿಳಾ ಪೊಲೀಸ್ ಮೊಬೈಲ್ ಕಳ್ಳನ ಹಿಡಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಮೊಬೈಲ್ ಕದ್ದುಕೊಂಡು ಓಡುತ್ತಿದ್ದ ಯುವಕನೊಬ್ಬನನ್ನು ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ ಒಬ್ಬರು ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಲವು ದಿನಗಳ ಹಿಂದೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಷ್ ಫಾರ್ಮಸಿ ಜಂಕ್ಷನ್​​ನಲ್ಲಿ ನಡೆದಿತ್ತು.

ಅಸಲಿಯಾಗಿ ಅಲ್ಲಿ ಆಗಿದ್ದೇ ಬೇರೆ, ಮೊಬೈಲ್​ ಕಿತ್ತುಕೊಂಡು ಓಡಿದ್ದು ಕಳ್ಳನಲ್ಲ. ಘಟನೆ ಹಿಂದೆ ಪ್ರೇಮ ಪ್ರಕರಣವಿತ್ತು ಎಂಬುದು ಇದೀಗ ಬೆಳಕಿಗೆ ಬಂದಿದೆ. ಫೆಬ್ರವರಿ 13 ರ ಸಂಜೆ 5.15 ಕ್ಕೆ ಮೊಬೈಲ್ ಕಸಿದು ಓಡಿ ಹೋಗುತ್ತಿದ್ದವನನ್ನು ಮಹಿಳಾ ಕಾನ್ಸ್​​ಟೇಬಲ್ ಚೇಸ್ ಮಾಡಿ ಹಿಡಿದಿದ್ದರು. ಆತನನ್ನು ಮೊಬೈಲ್‌ ಕದ್ದು ಪರಾರಿ ಆಗುತ್ತಿದ್ದಾನೆ ಎಂದು ಆರೋಪಿಸಲಾಗಿತ್ತು. ಆದರೆ, ಅಶೋಕನಗರ ಪೊಲೀಸರ ವಿಚಾರಣೆ ವೇಳೆ ಅಸಲಿ ಸತ್ಯ ಬಯಲಾಗಿದೆ.

ರಾಯಚೂರು ಮೂಲದ ಒಬ್ಬ ಯುವಕ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆಕೆ ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದಳು. ಆಕೆಗೆ ಪ್ರೇಮಿಗಳ ದಿನಾಚರಣೆಗೆ ಸರ್ಪ್ರೈಸ್ ನೀಡಲು ಯುವಕ ಊರಿನಿಂದ ಆಗಮಿಸಿದ್ದ. ಆದರೆ, ಕಾಲೇಜು ಬಳಿ ಬಂದಾಗ ಆತನಿಗೆ ಶಾಕ್ ಕಾದಿತ್ತು. ಪ್ರೇಯಸಿ ಮತ್ತೋರ್ವ ಸ್ನೇಹಿತನ ಜೊತೆಗೆ ಮಾತನಾಡುತ್ತಾ ನಿಂತಿದ್ದಳು.

ಇದೇ ವೇಳೆ, ಆತ ಯಾರು ಎಂದು ಯುವಕ ಪ್ರಿಯತಮೆ ಬಳಿ ಪ್ರಶ್ನಿಸಿದ್ದಾನೆ. ಆತ ಸ್ನೇಹಿತ ಅಷ್ಟೇ ಎಂದು ಆಕೆ ಉತ್ತರಿಸಿದ್ದಾಳೆ. ಹಾಗಾದರೆ ನಿನ್ನ ಮೊಬೈಲ್‌ ಕೊಡು ಎಂದು ಪ್ರಿಯತಮೆಯ ಸ್ನೇಹಿತನನ್ನು ಯುವಕ ಕೇಳಿದ್ದ. ಅಷ್ಟೇ ಅಲ್ಲದೆ, ನನ್ನ ಸ್ನೇಹಿತೆಗೆ ಏನು ಮೆಸೇಜ್ ಮಾಡಿದ್ದೀ ಎಂಬುದನ್ನು ನೋಡಬೇಕು ಎಂದಿದ್ದಾನೆ.

ಯುವಕ ಮೊಬೈಲ್ ಕೈಗೆ ತೆಗೆದುಕೊಳ್ಳುತ್ತಿದ್ದಂತೆಯೇ ಯುವತಿ ಜೋರಾಗಿ ಕಿರುಚಾಡಿದ್ದು, ಗಾಬರಿಗೊಂಡ ಯುವಕ ಮೊಬೈಲ್ ಜೊತೆಗೆ ಓಡಿ‌ ಹೋಗಿದ್ದಾನೆ. ತಕ್ಷಣ ಯುವತಿಯ ಕಾಲೇಜು ಸ್ನೇಹಿತ ಆತನ ಹಿಂದ ಓಡಲು ಆರಂಭಿಸಿದ್ದ. ಇವರಿಬ್ಬರನ್ನು ನೋಡಿದ ಮಹಿಳಾ ಕಾನ್ಸ್​ಟೇಬಲ್ ಯುವಕನನ್ನು ಬೆನ್ನಟ್ಟಿದ್ದರು. ನಂತರ ಯುವಕನನ್ನು ಹಿಡಿದು ಆಶೋಕನಗರ ಪೊಲೀಸರಿಗೆ ಒಪ್ಪಿಸಲಾಗಿತ್ತು.

ಇದನ್ನೂ ಓದಿ : ಬಾಗಲಕೋಟೆಯಲ್ಲಿ ಗ್ರಾ.ಪಂ ಸದಸ್ಯ ಹಾಗೂ ಕುಟುಂಬದವರ ಮೇಲೆ ಹ*ಲ್ಲೆ ಮಾಡಿದ ಅಧ್ಯಕ್ಷೆ ಪುತ್ರ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here