ಬೆಂಗಳೂರು : ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿರುವ ಸಂಸದ ಡಿವಿ ಸದಾನಂದಗೌಡ ಅವರು ಸುದ್ದಿಗೋಷ್ಠಿ ನಡೆಸಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈಶ್ವರಪ್ಪ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ಡಿ.ವಿ.ಸದಾನಂದಗೌಡ ಫುಲ್ ಗರಂ ಆಗಿದ್ದಾರೆ. ಬಿಎಸ್ವೈ ವಿರುದ್ಧ ಹೋರಾಟಕ್ಕೆ ಸದಾನಂದಗೌಡ ಸಾಥ್ ನೀಡಿದ್ದಾರೆ. ನಾನು ಕೈಲಾಗದವನಲ್ಲ, ಷಡ್ಯಂತ್ರ ನನಗೂ ಗೊತ್ತಿದೆ. ಕಾಂಗ್ರೆಸ್ಗೆ ಹೋಗಲ್ಲ ಬಿಜೆಪಿಯನ್ನೇ ಶುದ್ಧ ಮಾಡ್ತೀನಿ, ನಾನು ನನ್ನ ಕುಟುಂಬ, ನನ್ನ ಆಪ್ತ, ನನ್ನ ಚೇಲಾ ಅನ್ನೋದು ತಪ್ಪಬೇಕು ಎಂದು ಡಿವಿಎಸ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ಒಂದು ಕುಟುಂಬದ ಕೈನಿಂದ ಮುಕ್ತ ಆಗ್ಬೇಕು. ಈ ಎಲೆಕ್ಷನ್ನಲ್ಲಿ ಮೋದಿ ಮತ್ತೆ ಗೆಲ್ಲಬೇಕು, ಹೀಗಾಗಿ ಬೆಂಬಲ ಕೊಡ್ತೇನೆ. ಪ್ರತಾಪ್ ಸಿಂಹ, ಈಶ್ವರಪ್ಪ ಹೀಗೆ ಹಲವರಿಗೆ ಅನ್ಯಾಯ ಆಗಿದೆ. ಸಮಾನ ಮನಸ್ಕರ ಜೊತೆ ಸೇರಿ ಹೋರಾಟ ಮಾಡ್ತೇನೆ, ಸ್ವಾರ್ಥಕ್ಕಾಗಿ ಪಕ್ಷವನ್ನೇ ತಮ್ಮ ಕುಟುಂಬ ಮಾಡಿಕೊಳ್ಳಲು ಹೊರಟಿದ್ದಾರೆ. ನನಗೆ ಟಿಕೆಟ್ ತಪ್ಪಿಸಿದವರು ಮುಂದೆ ಪಶ್ಚಾತ್ತಾಪ ಪಡ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿಎಸ್ವೈ ಮೇಲೆ ಡಿವಿಎಸ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಸಂಸದ ಬಿ.ಎನ್ ಬಚ್ಚೇಗೌಡ..!