Download Our App

Follow us

Home » ರಾಜಕೀಯ » ಲೋಕಸಭೆ ಎಲೆಕ್ಷನ್​​​ : ಇಂದು ಬೆಂಗಳೂರಿನಲ್ಲಿ ಬಿಜೆಪಿ ಅವಲೋಕನಾ ಸಭೆ..!

ಲೋಕಸಭೆ ಎಲೆಕ್ಷನ್​​​ : ಇಂದು ಬೆಂಗಳೂರಿನಲ್ಲಿ ಬಿಜೆಪಿ ಅವಲೋಕನಾ ಸಭೆ..!

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಬಿಜೆಪಿ ಅವಲೋಕನಾ ಸಭೆ ನಡೆಯಲಿದೆ. ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿಯೂ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿತ್ತು. ರಾಜ್ಯದಲ್ಲಿ ಲೋಕಸಭೆ ಎಲೆಕ್ಷನ್​​​ ಮುಗಿದ ಹಿನ್ನಲೆ ಇಂದು ಸಭೆಯಲ್ಲಿ ಬಿಜೆಪಿ ನಾಯಕರು ಗೆಲುವು-ಸೋಲಿನ ಲೆಕ್ಕಾಚಾರ ಮಾಡಲಿದ್ದಾರೆ.

ನಾಯಕರು ಪ್ರತಿ ಕ್ಷೇತ್ರದಿಂದಲೂ ವರದಿ ತರಿಸಿಕೊಂಡು ಅವಲೋಕಿಸಲಿದ್ದು, ಎಷ್ಟು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬಹುದು, ಎಷ್ಟು ಕ್ಷೇತ್ರದಲ್ಲಿ JDS ಗೆಲ್ಲಬಹುದು ಎಂದು ಲೆಕ್ಕಾಚಾರ ಮಾಡಲಿದ್ದಾರೆ. ಗೆಲ್ಲುವ ಸಾಧ್ಯತೆ ಎಷ್ಟು, ಸೋಲುವ ಕ್ಷೇತ್ರಗಳಲ್ಲಿ ಹಿನ್ನಡೆ ಆಗಿದ್ದು ಏಕೆ..? ಯಾವ ಕ್ಷೇತ್ರದಲ್ಲಿ ಕಠಿಣ ಇತ್ತು. ಯಾವ ಕ್ಷೇತ್ರ ಸುಲಭವಾಗಿತ್ತು. ಚುನಾವಣೆ ಕೊನೆ ಕ್ಷಣದಲ್ಲಿ ಆಗಿರುವ ವ್ಯತ್ಯಾಸಗಳು ಏನು..? ಈ ಎಲ್ಲವನ್ನ ಆಧರಿಸಿ ನಾಯಕರು ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಿದ್ದಾರೆ. ವಿಧಾನಪರಿಷತ್​​​ ಚುನಾವಣೆಯ ಬಗ್ಗೆಯೂ ಬಿಜೆಪಿ ಕಾರ್ಯತಂತ್ರ ರೂಪಿಸಲಿದೆ.

ಜೆಡಿಎಸ್​ ಜೊತೆ ಮೈತ್ರಿ ಮುಂದುವರೆಸಿದ್ರೆ ಲಾಭವೋ ನಷ್ಟವೋ ಅನ್ನೋ ಬಗ್ಗೆ ಕೂಡ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೀಟಿಂಗ್​​​ ನಡೆಯಲಿದೆ.

ಇದನ್ನೂ ಓದಿ : ಜೈಲಿನಿಂದ ಹೊರಬಂದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಭರ್ಜರಿ ಸ್ವಾಗತ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here