ವಿಜಯಪುರ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣ ಸಂಬಂಧ ಒಂದೆಡೆ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಪ್ರಕರಣ ಕೈ- ಕಮಲದ ರಾಜಕೀಯ ಕಿತ್ತಾಟಕ್ಕೆ ದಾಳವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಹೆಣ್ಣು ಮಕ್ಕಳು ಟಾರ್ಗೆಟ್ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ವಿಜಯಪುದಲ್ಲಿ ಗುಜರಾತ್ ಉದಾಹರಣೆ ಕೊಟ್ಟು ಬಿಜೆಪಿ ವಿರುದ್ದ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿ, ಗುಜರಾತ್ನಲ್ಲಿ 13 ಲಕ್ಷ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ದಿನಕ್ಕೆ 6 ಹೆಣ್ಣು ಮಕ್ಕಳ ಮೇಲೆ ಗುಜರಾತ್ನಲ್ಲಿ ರೇಪ್ ಆಗುತ್ತೆ.
ಯತ್ನಾಳ್ರಂತಹ ಬಿಜೆಪಿ ನಾಯಕರು ಅಲ್ಲಿಗೆ ಹೋಗಿ ನ್ಯಾಯ ಕೇಳ್ತಾರಾ..? ನೇಹಾ ಪ್ರಕರಣವನ್ನು ರಾಜಕಾರಣಕ್ಕೆ ಎಳೆಯೋ ಬಿಜೆಪಿಗೆ ನಾಚಿಕೆ ಆಗ್ಬೇಕು ಎಂದು ವಿಜಯಪುರದಲ್ಲಿ ಬಿಜೆಪಿ ವಿರುದ್ಧ ಸಂತೋಷ್ ಲಾಡ್ ಗುಡುಗಿದ್ದಾರೆ.
ಇದನ್ನೂ ಓದಿ : ಚೊಂಬು ಹಿಡಿದು ಬಂದ ಕಾಂಗ್ರೆಸ್ಗೆ ರಾಜಾಹುಲಿ ತಿರುಗೇಟು : ‘ಕೈ’ ಪಡೆಗೆ ಬಿ.ಎಸ್ ವೈ ಖಡಕ್ ವಾರ್ನಿಂಗ್..!