Download Our App

Follow us

Home » ರಾಜಕೀಯ » ಆ ಹತ್ತು.. ಕಮಲಕ್ಕೆ ಭಾರೀ ಆಪತ್ತು – ವೋಟಿಂಗ್ ಹತ್ತಿರ ಬಂದರೂ ಬಿಜೆಪಿಗೆ ಬಂಡಾಯದ್ದೇ ಕುತ್ತು..!

ಆ ಹತ್ತು.. ಕಮಲಕ್ಕೆ ಭಾರೀ ಆಪತ್ತು – ವೋಟಿಂಗ್ ಹತ್ತಿರ ಬಂದರೂ ಬಿಜೆಪಿಗೆ ಬಂಡಾಯದ್ದೇ ಕುತ್ತು..!

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಆದರೆ ವೋಟಿಂಗ್ ಹತ್ತಿರ ಬಂದರೂ ಅಭ್ಯರ್ಥಿ ಘೋಷಣೆಯಿಂದ ಉಂಟಾದ ಬಂಡಾಯ  ಬಿಜೆಪಿ ಪಕ್ಷದಲ್ಲಿ ಇನ್ನು ಬಗೆಹರಿದಿಲ್ಲ. ಬಿಜೆಪಿ ಪಕ್ಷದಲ್ಲಿ ಬಂಡಾಯದ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಈಗಾಗಲೇ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುಖಂಡರ ಮುಸುಕಿನ ಗುದ್ದಾಟ ಆರಂಭವಾಗಿದೆ.

ಬಿಜೆಪಿ ಹೈಕಮಾಂಡ್  ಅಭ್ಯರ್ಥಿ ಘೋಷಣೆ ಮಾಡುತ್ತಿದಂತೆ ಹಲವು ಕ್ಷೇತ್ರದಲ್ಲಿ ನಾಯಕರ ನಡುವೆ ಟಿಕೆಟ್​ಗಾಗಿ ತಿಕ್ಕಟಾ ಸುರುವಾಗಿತ್ತು. ಇದರ ನಡುವೆ ಕೆಲವು ನಾಯಕರು ಬಂಡಯವಾಗಿ ಸ್ಪರ್ಧಿಸುವುದಾಗಿ ಕೂಡ ಘೋಷಣೆ ಕೂಡ ಮಾಡಿದ್ದರು. ಆದರೆ ಈ ಬಂಡಾಯವನ್ನು ಶಮನ ಮಾಡಬೇಕೆಂಬ ಉದ್ದೇಶದಿಂದ  ರಾಜ್ಯಕ್ಕೆ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯಕ್ಕೆ ಎಂಟ್ರಿ ಕೊಟ್ಟು, ಬಂಡಾಯ ಎದ್ದ ನಾಯಕರನ್ನು ಕರೆದು ಸಭೆ ನಡೆಸಿದ್ದರು. ಆದರೆ ಅಮಿತ್ ಶಾ ಬಂದು ಹೋದರೂ ಪಕ್ಷದಲ್ಲಿ ಬಂಡಾಯದ ಕಿಡಿ ಆರಿಲ್ಲ. ನಗುವಿನ ಡ್ರಾಮಾ ಮಾಡುತ್ತಲೇ ಒಳಗೊಳಗೇ ನಾಯಕರು ಗುಂಡಿ ತೋಡುತ್ತಿದ್ದಾರೆ.

ಎಲ್ಲೆಲ್ಲಿ ಬಿಜೆಪಿಗೆ ಗಂಭೀರ ಸಮಸ್ಯೆ ಇದೆ ಗೊತ್ತಾ..? ತುಮಕೂರು, ಉತ್ತರ ಕನ್ನಡ, ರಾಯಚೂರಿನಲ್ಲಿ ನಾಯಕರ ಬಂಡಾಯ ಇನ್ನು ಶಮನಗೊಂಡಿಲ್ಲ. ಇದರ ಜೊತೆಗೆ ದಾವಣಗೆರೆ, ಬೆಳಗಾವಿಯಲ್ಲೂ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು  ವಿರೋಧಿಗಳಿಗೆ ಮಣೆ ಹಾಕಿದ್ದಕ್ಕೆ ಅಭ್ಯರ್ಥಿಯ ಬೇಸರಕ್ಕೆ ಕಾರಣವಾಗಿದೆ. ಹಾಸನ, ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲೂ ಭಾರಿ ಭಿನ್ನಮತ ಸೃಷ್ಟಿಯಾಗಿದೆ. ಇನ್ನು ಬಿಜೆಪಿ ಹೈಕಮಾಂಡ್ ತುಮಕೂರು ಕ್ಷೇತ್ರದಿಂದ ಸೋಮಣ್ಣ ಅವರಿಗೆ ಟಿಕೆಟ್ ನೀಡಿದ ಬಳಿಕ ಮಾದುಸ್ವಾಮಿ ಅವರು ಅಂತರ ಕಾಯ್ದುಕೊಂಡಿದ್ದಾರೆ. ಬಾಗಲಕೋಟೆಯಲ್ಲಿ ಪ್ರಚಾರದ ನೇತೃತ್ವ ವಹಿಸಿದ್ದ ಕಾರಜೋಳ ಚಿತ್ರದುರ್ಗಕ್ಕೆ ಶಿಫ್ಟ್ ಆಗಿದ್ದಾರೆ. ಈ ಕಾರಣದಿಂದ ಇದೀಗ ಕಾರಜೋಳ ಚಿತ್ರದುರ್ಗಕ್ಕೆ ಬಂದಿದ್ದಕ್ಕೆ MLA ಚಂದ್ರಪ್ಪ ಟೀಂ ಫುಲ್ ಸೈಲೆಂಟ್ ಆಗಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಕೊಪ್ಪಳದಲ್ಲಿ ಮೇಲ್ನೋಟಕ್ಕೆ ರಾಜಿ ಅದಂತೆ ಕಂಡರೂ, ಪಕ್ಷದ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಾಲೇ ಇದೆ. ಪ್ರಮುಖವಾಗಿ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಈಶ್ವರಪ್ಪ ಬಂಡಾಯಕ್ಕೆ ಇನ್ನೂ ಮದ್ದು ಅರೆದಿಲ್ಲ. ಈ ಎಲ್ಲಾ ಅಂತರ್ ಯುದ್ಧಕ್ಕೆ ಬಿಜೆಪಿ  ಹತ್ತು ಕ್ಷೇತ್ರ ಕಳೆದುಕೊಳ್ಳುತ್ತಾ ಎಂದು ಕಾದುನೋಡಬೇಕಾಗಿದೆ.

1. ತುಮಕೂರು- ಸೋಮಣ್ಣಗೆ ಮಾಧುಸ್ವಾಮಿ ಟೆನ್ಷನ್
2. ದಾವಣಗೆರೆ- ಗಾಯತ್ರಿ ಸಿದ್ದೇಶ್ವರ್ಗೆ ರೇಣುಕಾ ಅಂಡ್ ಟೀಂ ಬಂಡಾಯ ಬಿಸಿ
3. ಉತ್ತರ ಕನ್ನಡ- ಕಾಗೇರಿ ಪರ ಪ್ರಚಾರಕ್ಕೆ ಬರ್ತಿಲ್ಲ ಅನಂತಕುಮಾರ್ ಹೆಗಡೆ
4. ಚಿತ್ರದುರ್ಗ- ಗೋವಿಂದ ಕಾರಜೋಳ ಪರ ಚಂದ್ರಪ್ಪ ಅಸಮಾಧಾನ
5. ಶಿವಮೊಗ್ಗ- ರಾಘವೇಂದ್ರ ವಿರುದ್ಧ ಈಶ್ವರಪ್ಪ ಬಂಡಾಯ ಸ್ಪರ್ಧೆ ನಿರ್ಧಾರ
6. ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್ ಮೇಲೆ ವಿಶ್ವನಾಥ್ಗೆ ಒಳಗೊಳಗೇ ಮುನಿಸು
7. ಕೊಪ್ಪಳ- ಅಭ್ಯರ್ಥಿ ಬಸವರಾಜ್ಗೆ ಸಂಸದ ಕರಡಿ ಸಂಗಣ್ಣ ಅಸಹಕಾರ
8. ಬಾಗಲಕೋಟೆ- ಕಾರಜೋಳ ಚಿತ್ರದುರ್ಗಕ್ಕೆ ಶಿಫ್ಟ್, ಗದ್ದಿಗೌಡರ್ಗೆ ನಾಯಕತ್ವ ಸಮಸ್ಯೆ
9. ಬೆಳಗಾವಿ- ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಟ್ಟಿದ್ದರಿಂದ ಸ್ಥಳೀಯರ ಮುನಿಸು
10. ರಾಯಚೂರು- ಅಮರೇಶ್ವರ್ ನಾಯಕ್ಗೆ ಬಿ.ವಿ.ನಾಯಕ್ ಬಂಡಾಯ ಬಿಸಿ

ಇದನ್ನೂ ಓದಿ : ಯುಗಾದಿ ಹಬ್ಬಕ್ಕೆ ಬಿಡುಗಡೆಯಾಯಿತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಹೊಸ ಪೋಸ್ಟರ್..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here