ನವದೆಹಲಿ : ಕೇಂದ್ರ ಸರ್ಕಾರದಿಂದ ಅನುದಾನದ ತಾರತಮ್ಯ ಆರೋಪಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಕೇಂದ್ರದ ವಿರುದ್ದ ಗುಡುಗಿದ್ದಾರೆ. ಕಾಂಗ್ರೆಸ್ ಸುಮಾರು ಎರಡು ಗಂಟೆಗಳ ಕಾಲ ಬೃಹತ್ ಧರಣಿ ನಡೆಸಿದ್ದು, ಕೇಂದ್ರದ ಮಲತಾಯಿ ಧೋರಣೆ ವಿರೋಧಿಸಿ ಪ್ರೊಟೆಸ್ಟ್ ನಡೆಸಿದ್ದಾರೆ.
138 ಶಾಸಕರು, MLCಗಳು, ಸಂಸದರು, ರಾಜ್ಯಸಭೆ ಸದಸ್ಯರು ಧರಣಿಯಲ್ಲಿ ಭಾಗಿಯಾಗಿದ್ದರು. ಚಿನ್ನದ ಮೊಟ್ಟೆ ಅಂತಾ ಕರ್ನಾಟಕದ ಕತ್ತು ಕೊಯ್ತಿದ್ದಾರೆ. ಬಿಜೆಪಿ ನಾಯಕರೇ ಪ್ರಧಾನಿ ಮುಂದೆ ತಲೆದೂಗೋದನ್ನು ಬಿಡಿ. ಕರ್ನಾಟಕಕ್ಕೆ ಆಗ್ತಿರೋ ಅನ್ಯಾಯ ತಪ್ಪಿಸಿ ಎಂದು ಜಂತರ್‌ಮಂತರ್‌ನಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.
ಕರ್ನಾಟಕದ ಹಿತದೃಷ್ಟಿಯಿಂದ ಈ ಪ್ರತಿಭಟನೆಯನ್ನು ಮಾಡಲಾಗುತ್ತಿದ್ದು ನಮಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಎರಡನೇ ರಾಜ್ಯ. ಹೀಗಿರುವಾಗ ನಮಗೆ ಯಾಕೆ ತಾರತಮ್ಯ.
ಉತ್ತರ ಪ್ರದೇಶಕ್ಕೆ 2 ಲಕ್ಷದ 80 ಸಾವಿರ ಕೋಟಿ ರೂಪಾಯಿ ತೆರಿಗೆಯ ಪಾಲು ಹಣ ಸಿಗುತ್ತದೆ. ಆದರೆ ಕರ್ನಾಟಕಕ್ಕೆ 50 ಸಾವಿರದ 257 ಕೋಟಿ ರೂಪಾಯಿ ತೆರಿಗೆ ಪಾಲು ಸಿಗುತ್ತದೆ. ಮಹಾರಾಷ್ಟ್ರದ ನಂತರ 2ನೇ ಅಧಿಕ ಟ್ಯಾಕ್ಸ್ ಕಟ್ಟುತ್ತೇವೆ. ಯಾಕೆ ನಮಗೆ ಅನ್ಯಾಯ ಮಾಡುತ್ತಿದ್ದಾರೆ.
ಕರ್ನಾಟಕ ಈ ಬಾರಿ ಕೇಂದ್ರಕ್ಕೆ ಒಟ್ಟು 4 ಲಕ್ಷ 30 ಸಾವಿರ ಕೋಟಿ ರೂಪಾಯಿ ತೆರಿಗೆ ಹಣ ಪಾವತಿ ಮಾಡಿದ್ದೇವೆ. ಉದಾಹರಣೆಗೆ 100 ರೂಪಾಯಿ ಟ್ಯಾಕ್ಸ್ ನಾವು ಕಟ್ಟಿದರೆ ಅದರಲ್ಲಿ ನಮಗೆ ಕೇವಲ 12 ರೂಪಾಯಿ ಬರುತ್ತಿದೆ. ಇದರಿಂದ 62 ಸಾವಿರದ 98 ಕೋಟಿ ರೂಪಾಯಿ ನಾವು ನಷ್ಟವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.
2017-18 ರಲ್ಲಿ 21 ಲಕ್ಷದ 46 ಸಾವಿರದ 235 ಕೋಟಿ ರೂ. ಕೇಂದ್ರದ ಬಜೆಟ್ ಇತ್ತು. ಇದರಲ್ಲಿ ನಮ್ಮ ಕರ್ನಾಟಕಕ್ಕೆ 31 ಸಾವಿರ 908 ಕೋಟಿ ಟ್ಯಾಕ್ಸ್ ಬರುತ್ತಿತ್ತು. ಇಂದಿರಾ ಆವಾಸ್ ಯೋಜನೆಯಲ್ಲಿ ಪ್ರತಿ ಮನೆಗೆ ಕೇಂದ್ರ, ರಾಜ್ಯ ಎರಡು ಕೊಡುತ್ತಾವೆ. ಆದರೆ ಇದಕ್ಕೆ ಪ್ರಧಾನಿ ಆವಾಸ್ ಮನೆ ಎಂದು. ಇದರಲ್ಲಿ ನಮ್ಮ ಪಾಲು ಏಕೆ ಹೇಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಡಿಸಿಎಂ ಡಿಕೆಶಿ ಗುಡುಗು : ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿ, ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಬರ ಪರಿಹಾರ ಸೇರಿದಂತೆ ಕರ್ನಾಟಕದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆಯಲ್ಲಿ ಹಣ ನೀಡಿಲ್ಲ. ಇನ್ನುವರೆಗೆ ಡಬಲ್ ಇಂಜಿನ್ ಸರ್ಕಾರ ಒಂದು ನಯಾಪೈಸೆ ಕೂಡ ನೀಡಿಲ್ಲ ಎಂದು ಡಿಸಿಎಂ ಆರೋಪ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವ್ರೇ ಭದ್ರಾಗೆ 5300 ಕೋಟಿ ಎಲ್ಲಿ..? ಮಹದಾಯಿ ಯೋಜನೆಗೆ ಯಾಕೆ ಪರಿಸರ ಪರ್ಮಿಟ್ ಇನ್ನು ಕೊಟ್ಟಿಲ್ಲ
ನಮ್ಮ ಬೆವರು, ನಮ್ಮ ರಕ್ತ, ನಮ್ಮ ತೆರಿಗೆ, ನಮ್ಮ ಹಕ್ಕು, ನಮ್ಮ ಪಾಲು ಕೇಳಲು ದೆಹಲಿಗೆ ಬಂದಿದ್ದೇವೆ. ನಮ್ಮ ತೆರಿಗೆ ಪಾಲು ನಮಗೆ ಕೊಡಿ ಎಂದು ಜಂತರ್ ಮಂತರ್ನಲ್ಲಿ ಡಿಸಿಎಂ ಡಿಕೆಶಿ ಗುಡುಗಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಬೃಹತ್ ಕಾಂಟ್ರಾಕ್ಟರ್ ಮೇಲೆ ಐಟಿ ರೇಡ್..!