Download Our App

Follow us

Home » ಅಪರಾಧ » ಲೈಂಗಿಕ ದೌರ್ಜನ್ಯ ಕೇಸ್ : ಬಿಜೆಪಿ ಮುಖಂಡ ದೇವರಾಜೇಗೌಡ ಅರೆಸ್ಟ್​..!

ಲೈಂಗಿಕ ದೌರ್ಜನ್ಯ ಕೇಸ್ : ಬಿಜೆಪಿ ಮುಖಂಡ ದೇವರಾಜೇಗೌಡ ಅರೆಸ್ಟ್​..!

ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಕೇಸ್​ನಲ್ಲಿ ದೇವರಾಜೇಗೌಡರನ್ನು ಹೊಳೆನರಸೀಪುರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. PSI ಕಾಳೆಗೌಡ, PSI ಸಲ್ಮಾನ್ ಖಾನ್ ಟೀಂ ದೇವರಾಜೇಗೌಡರನ್ನ ಹಿರಿಯೂರಿನಿಂದ ಬಂಧಿಸಿ ಕರೆದೊಯ್ದಿದ್ದಾರೆ.

ಹಿರಿಯೂರು ಪೊಲೀಸರು ಟೋಲ್​​ ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್​ 1 ರಂದು ದೇವರಾಜೇಗೌಡ ವಿರುದ್ಧ ದೂರು ದಾಖಲಾಗಿತ್ತು. ಲೈಂಗಿಕ ದೌರ್ಜನ್ಯ ಆರೋಪದಡಿ FIR ಕೂಡ ದಾಖಲಾಗಿತ್ತು. ಆದರೆ ದೇವರಾಜೇಗೌಡ ಸಂತ್ರಸ್ತೆ ವಿರುದ್ಧ ಹೆಬ್ಬಾಳದಲ್ಲಿ ದೂರು ದಾಖಲಿಸಿದ್ದರು. ನಿನ್ನೆ ದೇವರಾಜೇಗೌಡರನ್ನು ಬಂಧಿಸಿ ರಾತ್ರಿಯಿಡೀ ಹೊಳೆ ನರಸೀಪುರ ಪೊಲೀಸರು ಡ್ರಿಲ್​​​ ಮಾಡಿದ್ದಾರೆ. ಕೋರ್ಟ್​ ಮುಂದೆ ಹಾಜರು ಪಡಿಸಿ ಪೊಲೀಸರು ವಶಕ್ಕೆ ಕೇಳಲಿದ್ದಾರೆ.

ಮತ್ತೊಂದು ಆಡಿಯೋ ರಿಲೀಸ್​ : ಪ್ರಜ್ವಲ್​ ಪೆನ್​ಡ್ರೈವ್​ ಪ್ರರಣದ ಮತ್ತೊಂದು ಸ್ಫೋಟಕ ಆಡಿಯೋವನ್ನ ದೇವರಾಜೇಗೌಡ ರಿಲೀಸ್​ ಮಾಡಿದ್ದಾರೆ. L.R ಶಿವರಾಮೇಗೌಡ ಮಾತ್ನಾಡಿರೋ ಆಡಿಯೋ ಎಂದು ರಿಲೀಸ್ ಮಾಡಿದ್ದು, SIT ಮುಂದೆ ಡಿ.ಕೆ ಶಿವಕುಮಾರ್​ ಬಗ್ಗೆ ಚಕಾರ ಎತ್ತಂಗಿಲ್ಲ ಎಂದು L.R ಶಿವರಾಮೇಗೌಡ ತಾಕೀತು ಮಾಡಿರುವ ಆಡಿಯೋ ಎನ್ನಲಾಗಿದೆ.
SIT ನೋಟಿಸ್​ ಕೊಟ್ರೆ ಡಿಕೆ ಬಗ್ಗೆ ಚಕಾರ ಎತ್ತಬೇಡ, ನಾನು ಹಿಂದಿನಿಂದ ಹೋರಾಟ ಮಾಡ್ತಿಲ್ಲ. ಈ ಕೃತ್ಯ ಕಡಿಮೆಯಾಗ್ಬೇಕು ನಮ್ಮ ತಾಲೂಕು ಕ್ಲೀನ್​ ಆಗಬೇಕು, ನಾನು ಅವ್ರ ವಿರುದ್ಧ ಕೋರ್ಟ್​ನಲ್ಲೂ ಹೋರಾಟ ಮಾಡಿದ್ದೀನಿ ಎಂದು ದೇವರಾಜೇಗೌಡ, ಶಿವರಾಮೇಗೌಡ ಮಾತ್ನಾಡಿದ್ರು ಎನ್ನಲಾದ ಆಡಿಯೋ ರಿಲೀಸ್​ ಮಾಡಿದ್ದಾರೆ.

ಇದನ್ನೂ ಓದಿ : ಕೊಡಗು : SSLC ವಿದ್ಯಾರ್ಥಿನಿ ಹ*ತ್ಯೆ ಆರೋಪಿ ಪ್ರಕಾಶ್ ಆತ್ಮಹ*ತ್ಯೆ..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here