ಬೆಂಗಳೂರು : ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಖಾಲಿ ಚೊಂಬು ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಖಾಲಿ ಚೊಂಬು ಹಿಡಿದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಚೊಂಬು ಪ್ರೊಟೆಸ್ಟ್ನಲ್ಲಿ ರಾಜ್ಯದ ಉಸ್ತುವರಿ ರಣದೀಪ್ಸಿಂಗ್ ಸುರ್ಜೆವಾಲಾ ಕಿಡಿಕಾರಿ, ಕರ್ನಾಟಕದ ಬರಪರಿಹಾರದಲ್ಲಿ ಬಿಜೆಪಿ ಅನ್ಯಾಯ ಮಾಡಿದೆ. ನಾವು ಕೇಳಿದ್ದು 18174 ಕೋಟಿ ರೂಪಾಯಿ. ಕೊಟ್ಟಿದ್ದು ಮಾತ್ರ 3454 ಕೋಟಿ ರೂಪಾಯಿ. ನಾವು 100 ರೂ. ಪರಿಹಾರ ಕೇಳಿದ್ರೆ ಕೊಟ್ಟಿದ್ದು ಕೇವಲ 19ರೂಪಾಯಿ ಎಂದು ಗುಡುಗಿದ್ದಾರೆ.
ಇನ್ನು ಸುಪ್ರಿಂಕೋರ್ಟ್ ಮಧ್ಯಪ್ರವೇಶದ ನಂತರ 3454 ಕೋಟಿ ಕೊಟ್ಟಿದ್ದಾರೆ. ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದ ರೈತರಿಗೆ ಪರಿಹಾರ ಕೇಳಿದ್ದೆವು. ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ನೀಡಿದ್ದು ಖಾಲಿ ಚೊಂಬು. ಬಿಜೆಪಿ ಅಂದ್ರೆ ಭಾರತೀಯ ಚೊಂಬು ಪಾರ್ಟಿ. ಕರ್ನಾಟಕದ ಮತದಾರರೂ ಬಿಜೆಪಿಗೆ ಖಾಲಿ ಚೊಂಬು ಕೊಡಲಿದ್ದಾರೆ ಎಂದು ವಿಧಾನಸೌಧದ ಬಳಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಸುರ್ಜೆವಾಲಾ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ತಪ್ಪು ಮಾಡಿದ್ರೆ ನಾವು ಯಾರನ್ನೂ ಕ್ಷಮಿಸೋ ಪ್ರಶ್ನೆಯೇ ಇಲ್ಲ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಹೆಚ್ಡಿಕೆ ರಿಯಾಕ್ಷನ್..!