Download Our App

Follow us

Home » ಮೆಟ್ರೋ » ಬೆಂಗಳೂರಿನ ಬೈಕ್​ ಸವಾರರೇ ಎಚ್ಚರ – ನಮ್ಮ ದಾರೀಲಿ ನಾವ್​ ಹೋಗ್ತಿದ್ರೂ ಅಟ್ಟಾಡಿಸಿ ಬರುತ್ತೆ ವಿಧಿ..!

ಬೆಂಗಳೂರಿನ ಬೈಕ್​ ಸವಾರರೇ ಎಚ್ಚರ – ನಮ್ಮ ದಾರೀಲಿ ನಾವ್​ ಹೋಗ್ತಿದ್ರೂ ಅಟ್ಟಾಡಿಸಿ ಬರುತ್ತೆ ವಿಧಿ..!

ಬೆಂಗಳೂರು : ಇತ್ತೀಚಿನ ಕಾಲದಲ್ಲಿ ಬೈಕ್ ಓಡಿಸುವಾಗ ಎಷ್ಟೇ ಜಾಗರೂಕರಾಗಿದ್ದರು ಸಾಲದು. ನಮ್ಮ ದಾರೀಲಿ ನಾವ್​ ಹೋಗ್ತಿದ್ರೂ ವಿಧಿ ಯಾವ ಕ್ಷಣದಲ್ಲೂ ನಮ್ಮನು ಅಟ್ಟಾಡಿಸಿ ಬರಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಹೌದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕುಡುಕನೊಬ್ಬ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದು ಬೈಕ್ ಸವಾರನಿಗೆ ಗುದ್ದಿ ಬಲಿ ಪಡೆದಿರುವ ಘಟನೆ  ಭಾನುವಾರ(ಮೇ19) ನಡೆದಿತ್ತು. ಮಟ-ಮಟ ಮಧ್ಯಾಹ್ನವೇ ಹರಿನಾಥ್ ಎಂಬಾತ ಕುಡಿದು ಕಾರು ಚಾಲನೆ ಮಾಡಿದ ಪರಿಣಾಮ ಬೈಕ್ ಸವಾರ ವಿನಯ್ ಸಾವನ್ನಪ್ಪಿದ್ದ. ಮಲ್ಲೇಶ್ವರಂ ಸಂಚಾರಿ ಠಾಣಾ ವ್ಯಾಪ್ತಿಯ ಸುಬ್ರಮಣ್ಯ ನಗರದ ಮುಖ್ಯ ರಸ್ತೆಯಲ್ಲಿ ಭಾನುವಾರ ಈ ಭೀಕರ ಘಟನೆ ನಡೆದಿತ್ತು. ಕಾರು ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದು ನಂತರ ಬೈಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರು ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದಿದ್ದು, ವಿನಯ್ ಬೈಕ್ ಸಮೇತವಾಗಿ ಸುಮಾರು ದೂರ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿ ರಸ್ತೆ ಪಕ್ಕದ ಫುಟ್‌ಪಾತ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ನೆಲಕ್ಕೆ ಬಿದ್ದ ಬೈಕ್ ಸವಾರ ವಿನಯ್ ಹಾಗೂ ಆತನ ಸ್ನೇಹಿತ ಇಬ್ಬರೂ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಗಂಭೀರ ಗಾಯಗೊಂಡಿದ್ದ ವಿನಯ್ ದೇಹದಿಂದ ತುಂಬಾ ರಕ್ತ ಹರಿದು ಹೋಗಿತ್ತು. ಆಸ್ಪತ್ರೆಯಲ್ಲಿ ವಿನಯ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆತನ ಸ್ನೇಹಿತನಿಗೆ ಚಿಕಿತ್ಸೆ ಮುಂದುವರೆದಿದೆ.

ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ : ಹರಿನಾಥ್ ಎನ್ನುವ ವ್ಯಕ್ತಿ ಕಂಠಪೂರ್ತಿ ಕುಡಿದು ಅತ್ಯಂತ ಹೆಚ್ಚು ಜನನಿಬಿಡ ಸ್ಥಳದಲ್ಲಿ ಓವರ್ ಸ್ಪೀಡ್ ಆಗಿ ಕಾರು ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಿಂತಿದ್ದ ಆಟೋಗೆ ಗುದ್ದಿ, ಕಾರನ್ನು ಮತ್ತಷ್ಟು ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಏಕಾಏಕಿ ಕಾರು ಚಾಲಕ ತನ್ನ ವೇಗ ಹೆಚ್ಚಿಸಿದ್ದರಿಂದ ಮುಂದೆ ಬೈಕ್‌ನಲ್ಲಿ ಹೋಗುತ್ತಿದ್ದ ವಿನಯ್ ಮತ್ತು ಸ್ನೇಹಿತನಿಗೆ ಹಿಂಬದಿಯಿಂದ ಗುದ್ದಿದ್ದಾನೆ.

ಇನ್ನು ಬೈಕ್‌ಗೆ ಡಿಕ್ಕಿ ಹೊಡೆದು ಹರಿನಾಥ್ ಕಾರಿನಿಂದ ಕೆಳಗಿಳಿದು ಬಂದು ಏನಾಗಿದೆ ಎಂದು ಪರಿಶೀಲನೆ ಮಾಡುವಷ್ಟೂ ಶಕ್ತಿ ಇರಲಿಲ್ಲ. ತೀವ್ರವಾಗಿ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ಹರಿನಾಥ್ ಸ್ಥಳೀಯರು ಕೆಳಗೆ ಇಳಿ ಎಂದರೂ ಇಳಿಯಲಿಲ್ಲ. ನಂತರ, ಪೊಲೀಸರು ಬಂದರೂ ಇಳಿಯದೇ ಕಾರಿನಲ್ಲೇ ಕುಳಿತುಕೊಂಡಿದ್ದ ಆತನನ್ನು ಪೊಲೀಸರು ಜನರಿಂದ ಹಲ್ಲೆ ಮಾಡಿಸುವುದಿಲ್ಲ ಎಂದು ಭರವಸೆ ನೀಡಿ ಕಾರಿನಿಂದ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತಂತೆ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಇನ್ನೂ ಒಂದು ವಾರ ವರುಣನ ಅಬ್ಬರ – ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here