ಬೆಂಗಳೂರು : ಖಾಸಗಿ ಬಸ್ ಹರಿದು ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ನಾಗರಬಾವಿ ರಿಂಗ್ ರಸ್ತೆಯ ಮಲೆಮಹದೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಮುರಳಿ (40) ಮೃತ ಬೈಕ್ ಸವಾರ. ಮುರಳಿ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ವೇಗವಾಗಿ ಬಂದ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಬಸ್ ಮುರಳಿ ತಲೆಯ ಮೇಲೆ ಹರಿದಿದೆ. ಇದರಿಂದ ಮುರಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸದ್ಯ ಬಸ್ ಚಾಲಕನನ್ನು ಜ್ಞಾನಭಾರತಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಘಟನೆಯಲ್ಲಿ ಸಾವನ್ನಪ್ಪಿದ ಮುರಳಿ ಮೃತದೇಹವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಜ್ಞಾನಭಾರತಿ ಟ್ರಾಫಿಕ್ ಪೊಲೀಸರು ಬಸ್ ಡ್ರೈವರ್ನನ್ನು ವಶಕ್ಕೆ ಪಡೆದಿದ್ದು, ಜ್ಞಾನಭಾರತಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮೊಹಮ್ಮದ್ ನಲಪಾಡ್ ವಿರುದ್ಧದ ಕೇಸ್ ರದ್ದು – ಕಾಂಗ್ರೆಸ್ ಯುವ ನಾಯಕನಿಗೆ ಬಿಗ್ ರಿಲೀಫ್…!
Post Views: 282