Download Our App

Follow us

Home » ಮೆಟ್ರೋ » ಕೆಆರ್​​ಪುರಂನಲ್ಲಿ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್​ ಡಿಕ್ಕಿ : ಬೈಕ್ ಸವಾರ ಸಾ*ವು..!

ಕೆಆರ್​​ಪುರಂನಲ್ಲಿ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್​ ಡಿಕ್ಕಿ : ಬೈಕ್ ಸವಾರ ಸಾ*ವು..!

ಬೆಂಗಳೂರು : ಶೋಭಾ ಕರಂದ್ಲಾಜೆ ಕಾರಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಕೆಆರ್​​ಪುರಂ ಗಣೇಶ ದೇವಸ್ಥಾನದ ಬಳಿ ನಡೆದಿದೆ. 35 ವರ್ಷದ ಪ್ರಕಾಶ್ ಎಂಬಾತ ಸಾವನ್ನಪ್ಪಿದ ಬೈಕ್ ಸವಾರನಾಗಿದ್ದಾನೆ.

ಶೋಭಾ ಕರಂದ್ಲಾಜೆ ಕಾರ್​ ನಿಲ್ಲಿಸಿ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕಾರ್​ ಡ್ರೈವರ್​​​​​​​ ಡೋರ್​​ ಓಪನ್​ ಮಾಡಿದ್ದ ವೇಳೆ ಏಕಾಏಕಿ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್​ ಸವಾರ ಬಂದು ಡಿಕ್ಕಿ ಹೊಡೆದಿದ್ದರಿಂದ ಗಂಭೀರ ಗಾಯಗಳಾಗಿದೆ.

ಕೂಡಲೇ ಸವಾರನನ್ನು ಕೆಆರ್​​ಪುರಂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಸಾವನ್ನಪ್ಪಿದ್ದಾರೆ. ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೃತ ಯುವಕನ ಕುಟುಂಬ ಸದಸ್ಯರನ್ನು ಶೋಭಾ ಕರಂದ್ಲಾಜೆ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ ಕ್ಷೇತ್ರದಲ್ಲಿ ಸಿಎಂ ಪುತ್ರ ಯತೀಂದ್ರಗೆ ಪ್ರತಿಭಟನೆ ಶಾಕ್ ​​- ಚುನಾವಣೆ ಬಹಿಷ್ಕಾರ ಹಾಕೋದಾಗಿ ರೈತರಿಂದ ಎಚ್ಚರಿಕೆ..!

Leave a Comment

RELATED LATEST NEWS

Top Headlines

ಮಹಾರಾಷ್ಟ್ರದಲ್ಲಿ IT ಅಧಿಕಾರಿಗಳ ಬೃಹತ್​ ರೇಡ್​ – 26 ಕೋಟಿ ನಗದು, 90 ಕೋಟಿ ಮೌಲ್ಯದ ಸಂಪತ್ತು ಜಪ್ತಿ..!

ಮಹಾರಾಷ್ಟ್ರ : ಆದಾಯ ತೆರಿಗೆ ಇಲಾಖೆ (IT) ನಿನ್ನೆ ರಾತ್ರಿ ನಾಸಿಕ್‌ನಲ್ಲಿರುವ ಪ್ರಸಿದ್ಧ ಆಭರಣ ಮಳಿಗೆಯ ಮೇಲೆ ದಾಳಿ ನಡೆಸಿ 26 ಕೋಟಿ ಹಣವನ್ನು ಜಪ್ತಿ ಮಾಡಿದೆ. ಅಕ್ರಮ

Live Cricket

Add Your Heading Text Here