Download Our App

Follow us

Home » ಸಿನಿಮಾ » ಬಿಗ್‌ಬಾಸ್‌ ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ರಿ ಎಂಟ್ರಿ..ಮತ್ತೊಂದು ಟಾಸ್ಕ್‌, ಮತ್ತಷ್ಟು ರಿಸ್ಕ್‌..!

ಬಿಗ್‌ಬಾಸ್‌ ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ರಿ ಎಂಟ್ರಿ..ಮತ್ತೊಂದು ಟಾಸ್ಕ್‌, ಮತ್ತಷ್ಟು ರಿಸ್ಕ್‌..!

ಬೆಂಗಳೂರು : ಬಿಗ್‌ಬಾಸ್‌ ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಇಡೀ ಮನೆ ತುಂಬಿ ನಳನಳಿಸುತ್ತಿದೆ.

ಎಲ್ಲರೂ ತಮ್ಮ ಸ್ನೇಹಿತರ ಮಾತುಗಳನ್ನು, ಅವರ ಟಿಪ್ಸ್‌ಗಳನ್ನು ಕೊಡುವುದರಲ್ಲಿ ಮಗ್ನರಾಗಿರುವಾಗ ಬಿಗ್‌ಬಾಸ್ ಮನೆಗೆ ಒಂದು ಲಕ್ಷದ ಟಾಸ್ಕ್‌ ನೀಡಿದೆ. ಏನದು ಟಾಸ್ಕ್? ಈ ಕುರಿತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ದೊರಕಿದೆ.

ಟಾಸ್ಕ್‌ ಆಡಲು ಕೆಲವರು ವಿನಯ್ ಹೆಸರನ್ನೂ, ಕೆಲವರು ವರ್ತೂರು ಸಂತೋಷ್ ಅವರ ಹೆಸರನ್ನೂ ಸೂಚಿಸಿದ್ದಾರೆ. ಕೊನೆಗೆ ವರ್ತೂರ್ ಸಂತೋಷ್ ಅವರೇ ಟಾಸ್ಕ್‌ ಆಡಲು ಆಯ್ಕೆಯಾಗಿದ್ದಾರೆ. ಚೆಂಡನ್ನು ಒಂದು ದೊಡ್ಡ ತಿರುಗುಣಿಯ ಮೇಲೆ ಜೋಡಿಸಿಡಲಾಗಿದೆ. ಚೆಂಡು ಬೀಳಿಸದರೆ ತಿರುಗುಣಿ ತಿರುಗಿಸುವ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ವಿಫಲರಾಗಿದ್ದಾರೆ. ಇದನ್ನು ಕಂಡು ಸಂಗೀತಾ ಅಸಹನೆ ವ್ಯಕ್ತಪಡಿಸಿದ್ದಾರೆ.

‘ಯಾರಿಗೆ ಆಟ ಆಡಲು ಬರುತ್ತದೆಯೋ ಅವರೇ ಹೋಗಿ ಎಂದು ಇದಕ್ಕೇ ನಾನು ಹೇಳಿದ್ದು’ಎಂದು ಹೇಳಿದ್ದಾರೆ. ಇದನ್ನು ಕೇಳಿ ಸಿಟ್ಟಿಗೆದ್ದ ವರ್ತೂರು, ‘ಇರೆಸ್ಪೆಕ್ಟೀವ್ ಆಗಿ ಮಾತಾಡಬೇಡಿ. ನೀವು ಒಬ್ಬರ ಮೇಲೆ ಬ್ಲೇಮ್ ಮಾಡುವುದಕ್ಕಿಂತ ಮೊದಲು ನೀವೇನು ಎನ್ನುವುದನ್ನು ನೋಡಿಕೊಂಡರೆ ತುಂಬ ಉತ್ತಮವಾಗಿರುತ್ತದೆ’ ಎಂದು ವರ್ತೂರು ಕಿಡಿ ಕಾರಿದ್ದಾರೆ.

ಹಾಗಾದರೆ ಮನೆಯ ಸದಸ್ಯರು ಗೇಮ್‌ನಲ್ಲಿ ಗೆದ್ದರಾ ಸೋತರಾ? ಅವರ ಪರಿಣಾಮ ಏನಾಗಲಿದೆ? ಕಳೆದ ವಾರ ಸುದೀಪ್‌, ಎಲಿಮಿನೇಷನ್‌ ಕ್ಯಾನ್ಸಲ್ ಆಗಿಲ್ಲ, ಹೋಲ್ಡ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದರು. ಹಾಗಾದರೆ ಹೋಲ್ಡ್‌ನಲ್ಲಿರುವ ಎಲಿಮಿನೇಷನ್‌ ಯಾವತ್ತು ಚಾಲ್ತಿಗೆ ಬರಲಿದೆ? ಅದಕ್ಕೆ ಯಾರು ಬಲಿಯಾಗಲಿದ್ದಾರೆ? ಎಂಬ ಪ್ರಶ್ನೆ ಮೂಡಿದೆ.

ಫಿನಾಲೆಗೆ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿರುವಾಗ ಹಲವು ಸರ್ಪೈಸ್‌ಗಳನ್ನು ಬಿಗ್‌ಬಾಸ್‌ ನೀಡುತ್ತಿದ್ದಾರೆ. ಆ ಸರ್ಫೈಸ್‌ಗಳನ್ನು ಮಿಸ್‌ಮಾಡದೇ ನೋಡಲು ನಿರಂತರವಾಗಿ JioCinemaದಲ್ಲಿ ಬಿಗ್‌ಬಾಸ್ ನೋಡುತ್ತಿರಿ.

ಇದನ್ನೂ ಓದಿ : ಮೃತ ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಿದ ನಟ ಯಶ್..​

 

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here