ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ಜೋರಾಗಿಯೇ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಬಂದು ಹೋಗ್ತಿದ್ದಾರೆ. ಅಂತೆಯೇ ಧನರಾಜ್ ಅವರ ದೊಡ್ಡ ಕುಟುಂಬ ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟಿದೆ.
ದೊಡ್ಮನೆಯ ಗಾರ್ಡನ್ ಏರಿಯಾದಲ್ಲಿ ಧನರಾಜ್ ಫ್ಯಾಮಿಲಿಯ ಸದಸ್ಯರು ಹುಲಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನ ನೋಡಿದ ಧನರಾಜ್ ಕೂಡ ಹುಲಿ ಡ್ಯಾನ್ಸ್ ಮಾಡಿದ್ದು, ಈ ಒಂದು ಸಂತೋಷದಲ್ಲಿಯೇ ಪತ್ನಿ ಎಂಟ್ರಿ ಸಹ ಆಗುತ್ತದೆ. ಪತ್ನಿ ಪ್ರಜ್ಞಾ ತಮ್ಮದೇ ಸ್ಟೈಲ್ನಲ್ಲಿ ಪತಿಯ ಕಾಲೆಳೆದು ಕ್ಲಾಸ್ ತೆಗೆದುಕೊಂಡಿದ್ದಾರೆ.
ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ. ಇನ್ನು ಮಗಳು ತೊಟ್ಟಿಲಲ್ಲಿ ಮಲಗಿರೋದನ್ನು ನೋಡಿ ಧನರಾಜ್ ತುಂಬಾನೆ ಖುಷಿ ಆಗಿದ್ದಾರೆ. ಆಕೆಯನ್ನ ಎತ್ತಿಕೊಳ್ತಾರೆ. ಹೀಗೆ ಧನರಾಜ್ ಫ್ಯಾಮಿಲಿ ಮನೆಯಲ್ಲಿ ಹೊಸದೊಂದು ಉತ್ಸಾಹವನ್ನೆ ತುಂಬಿದೆ.
ಇದನ್ನೂ ಓದಿ : ‘ಬಂಗಾರ ವಂಚಕಿ’ ಐಶ್ವರ್ಯ ಮನೆಯಲ್ಲಿ ಐಷಾರಾಮಿ ಕಾರು, ಕೆಜಿ ಗಟ್ಟಲೆ ಬೆಳ್ಳಿ ಪತ್ತೆ..!