Download Our App

Follow us

Home » ಅಪರಾಧ » ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಜ್ವಲ್​ ರೇವಣ್ಣ ಕಾರ್​ ಡ್ರೈವರ್..!

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಜ್ವಲ್​ ರೇವಣ್ಣ ಕಾರ್​ ಡ್ರೈವರ್..!

ಬೆಂಗಳೂರು : ಪ್ರಜ್ವಲ್​ ರೇವಣ್ಣ ಪೆನ್‌ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಜ್ವಲ್​​​ ರೇವಣ್ಣ ಮಾಜಿ ಕಾರ್​ ಡ್ರೈವರ್​​ ಪೆನ್​​ ಡ್ರೈವ್​​​​ ಕೇಸ್​ನ ಪಿನ್​ ಟು ಪಿನ್​ ಮಾಹಿತಿ ಹಂಚಿಕೊಂಡಿದ್ದಾರೆ. 6 ನಿಮಿಷದ ವಿಡಿಯೋದಲ್ಲಿ ಪೆನ್​ ಡ್ರೈವ್​​ನ ರಣರೋಚಕ ಮಾಹಿತಿ ನೀಡಿದ್ದಾರೆ.

ನಾನು 15 ವರ್ಷದಿಂದ ಪ್ರಜ್ವಲ್‌ ರೇವಣ್ಣ ಫ್ಯಾಮಿಲಿಗೆ ಕಾರ್​ ಡ್ರೈವರ್​ ಆಗಿದ್ದೆ, ಒಂದು ವರ್ಷದ ಹಿಂದೆಯೇ ನಾನು ಕೆಲಸ ಬಿಟ್ಟಿದ್ದೀನಿ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ರು, ಹಿಂಸೆ ಕೊಟ್ಟರು, ಹಲ್ಲೆ ಮಾಡಿದರು ಆದ್ದರಿಂದ ಮನೆಯಿಂದ ಹೊರಬಂದೆ. ನನ್ನ ಮೇಲೆ ಪ್ರಜ್ವಲ್​ ರೇವಣ್ಣ ಕೋರ್ಟ್​ನಿಂದ ಸ್ಟೇ ತಂದಿದ್ರು, ನನ್ನ ಬಳಿ ಇರುವ ಫೋಟೋ, ವಿಡಿಯೋ ಬಳಸದಂತೆ ಕೋರ್ಟ್ ಸ್ಟೇ ನೀಡಿತ್ತು ಎಂದು ಕಾರ್ ಡ್ರೈವರ್ ಕಾರ್ತಿಕ್​​ ಹೇಳಿದ್ದಾರೆ.

ಈ ವಿಚಾರವಾಗಿ ವಕೀಲರಾಗಿದ್ದ ದೇವರಾಜೇಗೌಡರನ್ನು ಭೇಟಿಯಾಗಿದ್ದೆ, ದೇವರಾಜೇಗೌಡ ಇವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ನಿನ್ನ ಬಳಿ ಇರುವ ಫೋಟೋ, ವಿಡಿಯೋ ನನಗೆ ಕೊಡು, ನಾನು ಜಡ್ಜ್​​ ಮುಂದೆ ಮಾತ್ರ ಪ್ರೊಡ್ಯೂಸ್ ಮಾಡುವೆ ಅಂತಾ ಮಾತು ಕೊಟ್ಟಿದ್ದರು. ಹೀಗಾಗಿ ಬಿಜೆಪಿಯ ದೇವರಾಜೇಗೌಡಗೆ ಮಾತ್ರ ನಾನು ಪೆನ್​ಡ್ರೈವ್​​ ಕೊಟ್ಟಿದ್ದು, ಈ ವಿಡಿಯೋಗಳನ್ನು ದೇವರಾಜೇಗೌಡರೇ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿದ್ದಾರೆ.

ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ, ಪೆನ್‌ಡ್ರೈವ್ ಯಾರು ಹಂಚಿದರೂ ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದೆ ಎಂದು ಕಾರ್ ಡ್ರೈವರ್ ಪೆನ್​ಡ್ರೈವ್ ಬಗ್ಗೆ​ ರಹಸ್ಯ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : ಮೋದಿ ನಂತರ ಉತ್ತರಕ್ಕೆ ನಾಳೆ ಅಮಿತ್​​ ಶಾ ಎಂಟ್ರಿ – ಪ್ರಹ್ಲಾದ್ ಜೋಶಿ, ಬೊಮ್ಮಾಯಿ ಪರ ಮತಬೇಟೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here