Download Our App

Follow us

Home » ಅಪರಾಧ » ಮಗನಿಂದಲೇ ತಾಯಿಯ ಹ*ತ್ಯೆ ಕೇಸ್​ಗೆ ಬಿಗ್​ ಟ್ವಿಸ್ಟ್​​ : ತಾಯಿಯನ್ನು ಕೊಂ*ದಿದ್ದು ಮಗ ಅಲ್ಲ ಅಪ್ಪ..!

ಮಗನಿಂದಲೇ ತಾಯಿಯ ಹ*ತ್ಯೆ ಕೇಸ್​ಗೆ ಬಿಗ್​ ಟ್ವಿಸ್ಟ್​​ : ತಾಯಿಯನ್ನು ಕೊಂ*ದಿದ್ದು ಮಗ ಅಲ್ಲ ಅಪ್ಪ..!

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನ ಕೆಆರ್​​ಪುರಂನಲ್ಲಿ ಮಗನೇ ತಾಯಿಯನ್ನು ಕೊಂದ ಪ್ರಕರಣ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಹೌದು.. ತಾಯಿಯನ್ನು ಕೊಂದಿದ್ದು ಮಗ ಅಲ್ಲ ಅಪ್ಪ ಅನ್ನೊ ಸತ್ಯ ಬೆಳಕಿಗೆ ಬಂದಿದೆ.

ನೇತ್ರಾ ಎಂಬಾಕೆಗೆ ಹೊಡೆದಿದ್ದ ರಾಡ್​​ನ್ನು FSL ಪರೀಕ್ಷೆಗೆ ಕಳಿಸಿದಾಗ ಅಪ್ಪ ಮತ್ತು ಮಗ ಇಬ್ಬರ ಫಿಂಗರ್​ ಪ್ರಿಂಟ್​ ಪತ್ತೆಯಾಗಿತ್ತು. ಈ ವೇಳೆ ನಾನೇ ಕೊಂದೆ ಎಂದು ಪೊಲೀಸರ ಮುಂದೆ ಮಗ ಶರಣಾಗಿದ್ದ. ಫಿಂಗರ್ ಪ್ರಿಂಟ್ ಪತ್ತೆ ನಂತರ ನೇತ್ರಾ ಪತಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಪತಿ ಚಂದ್ರಪ್ಪ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾನೆ.

ನನ್ನ ಪತ್ನಿಗೆ ಅಕ್ರಮ ಸಂಬಂಧ, ಕುಡಿತದ ಚಟ ಇತ್ತು ಅಂತಾ ಆರೋಪ ಮಾಡಿದ್ದಾನೆ. ಕೆಲವೊಮ್ಮೆ 2-3 ದಿನಗಳ ಕಾಲ ಮನೇಗೆ ಬರ್ತಾ ಇರಲಿಲ್ಲ, ಊಟ ಇಲ್ಲದೆ ಉಪವಾಸ ಇರ್ತಿದ್ವಿ, ಕೇಳಿದ್ರೆ ಅವಾಜ್​ ಹಾಕ್ತಿದ್ದಳು. ಹೀಗಾಗಿ ಮಗನ ಜೊತೆ ಸೇರಿ ಕೊಲೆ ಮಾಡಲು ನಿರ್ಧರಿಸಿದ್ದೆ, ನನಗೆ ವಯಸ್ಸಾಗಿದೆ ಅಂತಾ ಅವನೇ ಪೊಲೀಸರ ಮುಂದೆ ಶರಣಾದ. ತಂದೆ ಜೈಲಿಗೆ ಹೋಗೋದು ಬೇಡ ಅಂತಾ ಮೈಮೇಲೆ ಎಳೆದುಕೊಂಡ ಎಂದು ನೇತ್ರಾ ಪತಿ ಬಾಯಿಬಿಟ್ಟಿದ್ದಾನೆ.

ತಂದೆ ರಾಡ್​ನಿಂದ ಹೊಡೆದ ಬಳಿಕ ತಾಯಿ ನೇತ್ರಾ ಕುಸಿದು ಬಿದ್ದಿದ್ದಳು. ಸತ್ತಿರೋದು ಕನ್ಫರ್ಮ್ ಆದ ಬಳಿಕ ಚಂದ್ರಪ್ಪ ಅಲ್ಲಿಂದ ಎಸ್ಕೇಪ್ ಆಗಿದ್ದ. ಇದೀಗ ಮಗನ ಜೊತೆ ಪತಿ ಚಂದ್ರಪ್ಪ ಕೂಡ ಕೊಲೆಯಲ್ಲಿ‌ ಭಾಗಿ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ : ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿ ಮೇಲೆ ಅತ್ಯಾಚಾರ ಆರೋಪ : ಇಂಡಿಯನ್ ಹಾಕಿ ಟೀಂ ಪ್ಲೇಯರ್ ವಿರುದ್ಧ FIR..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here