Download Our App

Follow us

Home » ರಾಜಕೀಯ » ಬಿಜೆಪಿಗೆ ಬಿಗ್​ ಶಾಕ್​​ – ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾದ ಕರಡಿ ಸಂಗಣ್ಣ..!

ಬಿಜೆಪಿಗೆ ಬಿಗ್​ ಶಾಕ್​​ – ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾದ ಕರಡಿ ಸಂಗಣ್ಣ..!

ಬೆಂಗಳೂರು : ಮತದಾನಕ್ಕೆ 10 ದಿನ ಬಾಕಿ ಇರುವಾಗಲೇ ಬಿಜೆಪಿಗೆ ಬಿಗ್​ ಶಾಕ್​​ ಎದುರಾಗಿದೆ. ಕೊಪ್ಪಳದ ಸಂಸದ ಕರಡಿ ಸಂಗಣ್ಣ BJPಗೆ ಗುಡ್​ಬೈ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಕರಡಿ ಸಂಗಣ್ಣ ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

ಕೊಪ್ಪಳ ಟಿಕೆಟ್​ ಸಿಗದೇ ಬಿಜೆಪಿ ಮೇಲೆ ಕಿಡಿಕಾರಿದ್ದ ಕರಡಿ ಸಂಗಣ್ಣ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ. ಕರಡಿ ಸಂಗಣ್ಣ ಬಿಎಸ್​ವೈ, ರಾಧಾಮೋಹನ್​ ದಾಸ್​ ಮನವೊಲಿಕೆಗೆ ಜಗ್ಗದೆ, ನಿನ್ನೆ ಲೋಕಸಭಾ ಸದಸ್ಯತ್ವ ಮತ್ತು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕರಡಿ ಸಂಗಣ್ಣ ಕಾಂಗ್ರೆಸ್​ ಸೇರ್ಪಡೆಯಿಂದ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ.

ಕೊಪ್ಪಳ ಭಾಗದಲ್ಲಿ ಕರಡಿ ಸಂಗಣ್ಣ ಪ್ರಭಾವಿಯಾಗಿದ್ದು, ತಮ್ಮ ಅಪಾರ ಬೆಂಬಲಿಗರ ಜತೆ ಕಾಂಗ್ರೆಸ್​ ಸೇರಿದ್ದಾರೆ. ಕಾಂಗ್ರೆಸ್​ ನಾಯಕರು MLC ಸ್ಥಾನದ ಆಫರ್​​ ನೀಡಿದ್ದು, ಸ್ಥಾನಮಾನ ಪಕ್ಕಾ ಆಗ್ತಿದ್ದಂತೆ ಸ್ಪೀಕರ್​​​ಗೆ ರಾಜೀನಾಮೆ ಪತ್ರ ಸಲ್ಲಿದ್ದಾರೆ.

ಇದನ್ನೂ ಓದಿ : ಕನ್ನಡದ ಪ್ರಚಂಡ ಕುಳ್ಳ ನಟ ದ್ವಾರಕೀಶ್ ಪಂಚಭೂತಗಳಲ್ಲಿ ಲೀನ..!

Leave a Comment

RELATED LATEST NEWS

Top Headlines

ಪಠಾಣ್​ ಸಿನಿಮಾಗೆ ಸೆಡ್ಡು ಹೊಡೆದ ಕೆಡಿ : ದುಬಾರಿ ಮೊತ್ತಕ್ಕೆ ಚಿತ್ರದ ಆಡಿಯೋ ರೈಟ್ಸ್ ಸೇಲ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್​​ನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದರ ಬೆನ್ನಲೇ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ

Live Cricket

Add Your Heading Text Here