Download Our App

Follow us

Home » ಮೆಟ್ರೋ » ಖಾಕಿ ಕೋಟಿ ದಂಧೆ : ಮೆಜೆಸ್ಟಿಕ್​ನಲ್ಲಿ ಖಾಸಗಿ ಬಸ್​ಗೆ ಬೆಂಕಿ ಬಿದ್ದಿರೋ ಹಿಂದಿದೆ ಮಹಾ ಭ್ರಷ್ಟಾಚಾರ – ಪೊಲೀಸರ ಲಂಚದ ವಿಡಿಯೋ ಲೀಕ್..!

ಖಾಕಿ ಕೋಟಿ ದಂಧೆ : ಮೆಜೆಸ್ಟಿಕ್​ನಲ್ಲಿ ಖಾಸಗಿ ಬಸ್​ಗೆ ಬೆಂಕಿ ಬಿದ್ದಿರೋ ಹಿಂದಿದೆ ಮಹಾ ಭ್ರಷ್ಟಾಚಾರ – ಪೊಲೀಸರ ಲಂಚದ ವಿಡಿಯೋ ಲೀಕ್..!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್​ನಲ್ಲಿ ದಿನ ನಿತ್ಯ ಸಾವಿರಾರು ಜನರು ಒಡಾಡ್ತಾರೆ. ಕಾಲಿಡಲು ಜಾಗವಿಲ್ಲದಷ್ಟು ಬ್ಯುಸಿ ಏರಿಯಾದಲ್ಲಿ ನಿನ್ನೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ ಭಾರೀ ದುರಂತ ಒಂದು ನಡಿಯುತ್ತಿತ್ತು.

ನೂರಾರು ಕಮರ್ಷಲ್​ ಕಾಂಪ್ಲೆಕ್ಸ್​.. ಸಾವಿರಾರು ಜನರ ಓಡಾಟದ ಮಧ್ಯದಲ್ಲಿ ನಿನ್ನೆ ಸಂಜೆ ಮೆಜೆಸ್ಟಿಕ್​ನಲ್ಲಿ ಖಾಸಗಿ ಬಸ್​ಗೆ ಬೆಂಕಿ ಬಿದ್ದಿದೆ. ಬೆಂಕಿ ತಗುಲಿದ ಕೆಲ ನಿಮಿಷಗಳಲ್ಲಿಯೇ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ. ಆದರೆ ಮೆಜೆಸ್ಟಿಕ್​ನಲ್ಲಿ  ಖಾಸಗಿ ಬಸ್​ಗೆ ಬೆಂಕಿ ಬಿದ್ದಿರೋ ಹಿಂದಿದೆ ಮಹಾ ಭ್ರಷ್ಟಾಚಾರ. ಜನರ ಪ್ರಾಣವನ್ನೇ ಒತ್ತೆಯಿಟ್ಟು ಪೊಲೀಸರು ಲಂಚ ವಸೂಲಿ ಮಾಡುತ್ತಿರುವ ಸತ್ಯ ಬಟಾ ಬಯಲಾಗಿದೆ.

ನೋ ಪಾರ್ಕಿಂಗ್​ ಬೋರ್ಡ್​ ಇರೋ ಕಡೆ ಬೈಕ್​ ಪಾರ್ಕ್​ ಮಾಡಿದ್ರೆ ಪೊಲೀಸರು ಕೇಸ್ ಹಾಕೋದು ಎಲ್ಲರಿಗೂ ತಿಳಿದೆಯಿದೆ. ಆದರೆ ಮೆಜೆಸ್ಟಿಕ್ ಏರಿಯಾದಲ್ಲಿ ಮಾತ್ರ ಖಾಸಗಿ ಬಸ್​ ಪಾರ್ಕ್​ ಮಾಡಿದ್ರೆ ಪೊಲೀಸರು ಕೇಳೋದೆ ಇಲ್ಲ. ಆನಂದ್​ ರಾವ್​ ಸರ್ಕಲ್​, ರೈಲ್ವೇ ಪ್ಯಾರಲಲ್​ ರೋಡ್​ನಲ್ಲಿ ಖಾಸಗಿ ಬಸ್​ಗಳದ್ದೇ ದರ್ಬಾರ್​. ಅಷ್ಟೇ ಅಲ್ಲದೇ ನೋ ಪಾರ್ಕಿಂಗ್ ಸ್ಥಳದಲ್ಲಿ ಬಸ್ ಪಾರ್ಕ್​ ಮಾಡಿ ರಿಪೇರಿ ಮಾಡ್ತಿರೋ ಬಸ್​ಗಳಿಂದ ಡಿಸೇಲ್​ ಲೀಕ್​ ಆಗುತ್ತಿದ್ದು, ನಿನ್ನೆ ಬಸ್​ಗೆ ಬೆಂಕಿ ತಗುಲಲು ಡಿಸೇಲ್​ ಲೀಕ್​ ಆಗೋದೇ ಕಾರಣ ಎಂದು ಹೇಳಲಾಗುತ್ತಿದೆ.

ರಸ್ತೆ ಬದಿಯಲ್ಲೇ ಖಾಸಗಿ ಬಸ್​ ರಿಪೇರಿ ಮಾಡುವುದರಿಂದ ರಸ್ತೆಯಲ್ಲಿ ಆಯಿಲ್​​ಗಳು ಹರಿದಾಡುತ್ತದೆ. ಆಯಿಲ್​ ಬಿದ್ದ ರಸ್ತೆಯಲ್ಲಿ ನೂರಾರು ಬೈಕ್​ ಸವಾರರು ಸ್ಕಿಡ್​ ಆಗಿ ಸಾವು-ನೋವು ಸಂಭವಿಸಿದೆ. ಆದರೆ ಖಾಸಗಿ ಬಸ್​ಗಳಿಂದ ಡಿಸೇಲ್​ ಲೀಕ್​ ಆಗೋದು ಗೊತ್ತಿದ್ರು ಪೊಲೀಸರು ಕೇಸ್​ ಮುಚ್ಚಿ ಹಾಕಲು ಪ್ರಮುಖ ಕಾರಣ ಬಸ್​ ಮಾಲೀಕರ ಜೊತೆ ಪೊಲೀಸ್​ ಅಡ್ಜಸ್ಟ್​ಮೆಂಟ್.

ಹೌದು, ಡಿಸೇಲ್​ ಲೀಕ್​ ಅಡ್ಜಸ್ಟ್​ಮೆಂಟ್​ನ ಎಕ್ಸ್​ಕ್ಲೂಸಿವ್​ ಆಡಿಯೋ ಇದೀಗ ಬಿಟಿವಿಗೆ ಲಭ್ಯವಾಗಿದೆ. ಹಲವು ಬಸ್​ ಕಂಪನಿಗಳಿಂದ ಪೊಲೀಸರು ಮಂತ್ಲಿ ಕೋಟಿ ಕೋಟಿ ಲಂಚ ಪಡೆಯುತ್ತಿದ್ದಾರೆ. ಕಾಸು ಕೊಟ್ರೆ ಪೊಲೀಸರೇ ಆಯಿಲ್​ ಬಿದ್ದ ರಸ್ತೆಗೆ ಮಣ್ಣು ತಂದು ಹಾಕ್ತಾರೆ. ಲಂಚಕ್ಕಾಗಿ ಬಸ್​ ಮಾಲೀಕನನ್ನು ಪೊಲೀಸರು​ ಪುಸಲಾಯಿಸುತ್ತಿರುವ ಆಡಿಯೋ ಲಭ್ಯವಾಗಿದ್ದು, ಲಂಚ ತೆಗೆದುಕೊಳ್ಳೊ ಪೊಲೀಸರು ಯಾರು..? ಕೋಟಿ ಕೋಟಿ ಕೊಟ್ಟಿದ್ಯಾರು..? ಖಾಸಗಿ ಬಸ್​ಗೆ ಮೆಜೆಸ್ಟಿಕ್​ನಲ್ಲಿ ಪಾರ್ಕ್​ ಮಾಡೋಕೆ ಅವಕಾಶ ಕೊಟ್ಟವರಾರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬಿಟಿವಿಯಿಂದ ಇಂದು ಕಾರ್ಯಾಚರಣೆ ನಡೆಯಲಿದೆ.

ಇದನ್ನೂ ಓದಿ : ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here