ಬೀದರ್ : ಸಾಲ ಬಾಧೆಗೆ ಸಿಲುಕಿ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಹೊರವಲಯದ ಚಿಟ್ಟಾ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮಹ್ಮದ್ ಸೊಹೆಲ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಡಾಕ್ಟರ್.
ಬೀದರ್ ಹೊರವಲಯದ ಚಿಟ್ಟಾ ಅರಣ್ಯ ಪ್ರದೇಶದಲ್ಲಿ ಮರಕ್ಕೆ ಮಹ್ಮದ್ ಸೊಹೆಲ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಪಿಜಿ ವಿದ್ಯಾರ್ಥಿಯಾಗಿದ್ದ ಸೊಹೆಲ್, ಬಜಾಜ್ ಫೈನಾನ್ಸ್ ಹಾಗೂ ಇನ್ನಿತರ ಖಾಸಗಿ ಆನ್ಲೈನ್ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಆನ್ಲೈನ್ ಹೂಡಿಕೆಯಲ್ಲಿ ಭಾರೀ ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.
ಕಳೆದ ಸಪ್ಟೆಂಬರ್ 4ರಂದು ಮನೆಯಿಂದ ಬೈಕ್ನಲ್ಲಿ ಹೊರ ಹೊರಗಿದ್ದ ಸೊಹೆಲ್, ಬಳಿಕ ನಾಪತ್ತೆಯಾಗಿದ್ದರು. ನಿನ್ನೆ (ಸ.10) ಸೊಹೆಲ್ ಶವ ಕೊಳೆತ ಸ್ಥಿತಿಯಲ್ಲಿ ಚಿಟ್ಟಾ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮೈಸೂರು : ಮಗಳ ಮದುವೆಗೆ ಇಟ್ಟಿದ್ದ 20 ಲಕ್ಷ ನಗದು, 500 ಗ್ರಾಂ ಚಿನ್ನ ಕಳವು..!