ಮೈಸೂರು : ಮಗಳ ಮದುವೆಗೆ ಇಟ್ಟಿದ್ದ 20 ಲಕ್ಷ ಹಣ ಕಳವಾಗಿರುವ ಘಟನೆ ಚಾಮರಾಜನಗರದ ಹನೂರು ಪಟ್ಟಣದಲ್ಲಿ ನಡೆದಿದೆ. ಚಿನ್ನದೊರೆ ಎಂಬುವವರ ಮನೆಗೆ ನುಗ್ಗಿ ಖದೀಮರು 20 ಲಕ್ಷ ನಗದು, 500 ಗ್ರಾಂ ಚಿನ್ನ ಕದ್ದಿದ್ದಾರೆ.
ಚಿನ್ನದೊರೆಯವರ ಮೂರನೇ ಮಗಳು ದರ್ಶಿನಿ ಮದುವೆ ಖರ್ಚಿಗಾಗಿ ಮನೆಯಲ್ಲಿ 20 ಲಕ್ಷ ನಗದು ಇಟ್ಟಿದ್ರು. ಕಾರ್ಯನಿಮಿತ್ತ ಫ್ಯಾಮಿಲಿ ತಮಿಳುನಾಡಿಗೆ ಹೋಗಿತ್ತು. ಸೋಮವಾರ ತಡರಾತ್ರಿ ವಾಪಾಸ್ ಮನೆಗೆ ಬಂದಾಗ ಕಳವಾಗಿರೋದು ಪತ್ತೆಯಾಗಿದ್ದು, ಬೆರಳಚ್ಚು ತಜ್ಞರಿಂದ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಇದೇ ವಾರ್ಡ್ನಲ್ಲಿ MLA ಎಂ.ಆರ್. ಮಂಜುನಾಥ್ ಮನೆಯೂ ಇದೆ. MLA ವಾಸವಿರೋ ಏರಿಯಾದಲ್ಲೇ ಕಳ್ಳರು ಕೈಚಳಕ ತೋರಿಸಿದ್ದಾರೆ. ಇದೀಗ ಪೊಲೀಸರ ವೈಫಲ್ಯ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹನೂರು ಪೊಲೀಸರಿಂದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೊಲೆ ಕೇಸ್ಗೆ ಸಾಥ್ ಕೊಟ್ಟ ಜೈಲ್ ವಾರ್ಡನ್ – ಕಳ್ಳತನ ಕೇಸ್ ತನಿಖೆ ವೇಳೆ ರಹಸ್ಯ ಬಯಲು..!
Post Views: 145