ಬೆಂಗಳೂರು : ಕೆ.ಆರ್ ನಗರದ ಸಂತ್ರಸ್ತೆಯೋರ್ವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ಆದೇಶವನ್ನು ಮೇ 31ಕ್ಕೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕಾಯ್ದಿರಿಸಿದೆ.
ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ಬಂಧನ ಭೀತಿಯಿಂದ ಭವಾನಿ ರೇವಣ್ಣ ಮುಂಜಾಗ್ರತಾವಾಗಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದಿಗೆ ಮುಂದೂಡಿತ್ತು.
ಇದೀಗ ಇಂದು ವಿಚಾರಣೆ ನಡೆಸಿದ ಕೋರ್ಟ್ ವಾದ ಪ್ರತಿವಾದ ಆಲಿಸಿ ಜಾಮೀನು ಅರ್ಜಿ ಆದೇಶವನ್ನ ಮೇ31ಕ್ಕೆ ಕಾಯ್ದಿರಿಸಿದೆ. ಇದ್ದರಿಂದಾಗಿ ಮೇ. 31 ರವರೆಗೆ ಭವಾನಿ ರೇವಣ್ಣಗೆ ಟೆನ್ಷನ್ ಶುರುವಾಗಿದೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಅಬಾರ್ಷನ್ ದಂಧೆ – ನರ್ಸ್ ನಿರ್ಲಕ್ಷ್ಯಕ್ಕೆ ಮಹಿಳೆ ಬ*ಲಿ..!
Post Views: 84