Download Our App

Follow us

Home » ಅಪರಾಧ » ಬಾಗಲಕೋಟೆಯಲ್ಲಿ ಅಬಾರ್ಷನ್​ ದಂಧೆ – ನರ್ಸ್​ ನಿರ್ಲಕ್ಷ್ಯಕ್ಕೆ ಮಹಿಳೆ ಬ*ಲಿ..!

ಬಾಗಲಕೋಟೆಯಲ್ಲಿ ಅಬಾರ್ಷನ್​ ದಂಧೆ – ನರ್ಸ್​ ನಿರ್ಲಕ್ಷ್ಯಕ್ಕೆ ಮಹಿಳೆ ಬ*ಲಿ..!

ಬಾಗಲಕೋಟೆ : ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಹಗರಣ ಮಾಸುವ ಮುನ್ನವೇ ಇದೀಗ ಗಡಿಜಿಲ್ಲೆ ಬಾಗಲಕೋಟೆಯಲ್ಲಿ ಭ್ರೂಣಲಿಂಗ ಪತ್ತೆ ಹಗರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾಗಲಕೋಟೆಯ ಮಹಾಲಿಂಗ ಆಸ್ಪತ್ರೆ ಮಾಜಿ ನರ್ಸ್ ವಿರುದ್ಧ ಅಬಾರ್ಷನ್​ ದಂಧೆ ಆರೋಪ ಕೇಳಿ ಬಂದಿದ್ದು, ನರ್ಸ್​ ಕವಿತಾ ಬದನ್ನನವರ್ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

ಮಹಾರಾಷ್ಟ್ರ ಕೊಲ್ಹಾಪುರ ಮೂಲದ‌‌ ಗರ್ಭಿಣಿ ಮಹಿಳೆ ಮೀರಜ್​​ನಲ್ಲಿ ಸ್ಕ್ಯಾನಿಂಗ್​ ಮಾಡಿಸಿದ್ದರು. ಸ್ಕ್ಯಾನಿಂಗ್  ವೇಳೆ ಹೆಣ್ಣು ಮಗು ಇದೆ ಅಂತಾ ಗೊತ್ತಾಗಿ ಕವಿತಾರನ್ನು ಸಂಪರ್ಕಿಸಿದ್ದರು. ಇನ್ನು ನರ್ಸ್​ ಕವಿತಾ ತನ್ನ ನಕಲಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ ಟ್ರೀಟ್ ಮಾಡಿದ್ದಾರೆ. 3ನೇಯದ್ದೂ ಹೆಣ್ಣು ಮಗು ಎಂದು ಗರ್ಭಪಾತ ಮಾಡಿಸಿಕೊಂಡು ಗರ್ಭಿಣಿ ಮಹಿಳೆ ಸೊನಾಲಿ ಕಾರ್​ನಲ್ಲಿ ಹೋಗ್ತಿದ್ದಾಗ ಸಾವನ್ನಪ್ಪಿದ್ದಾಳೆ.

ನರ್ಸ್ ಕವಿತಾ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಮನೆಯೊಂದರಲ್ಲಿ ದಂಧೆ ನಡೆಸುತ್ತಿದ್ದ ಆರೋಪ ಕೇಳಿ ಬಂದಿದ್ದು, ಈ ಹಿಂದೆಯೂ ಕವಿತಾ ವಿರುದ್ಧ ಗರ್ಭಪಾತ ವಿಚಾರದಲ್ಲೇ  ಕೇಸ್ ದಾಖಲಾಗಿತ್ತು. ಪ್ರಕರಣದ ಸಂಬಂಧ ಸಾಂಗ್ಲಿ ಪೊಲೀಸರು ಸೊನಾಲಿ ಸಂಬಂಧಿ ವಿಜಯ್​ ಗೌಲಿ, ಕವಿತಾ ಬದನ್ನವರ್ ಅರೆಸ್ಟ್ ಮಾಡಿದ್ದಾರೆ.

ಅಬಾರ್ಷನ್​ಗೆ ಮಾರುತಿ ಕರವಾಡ ಎಂಬಾತ ಕೂಡ ಸಹಕರಿಸಿದ್ದ ಹಾಗೂ ಈಗಾಗಲೇ ಅರೆಸ್ಟ್​​ ಆಗಿರುವ ಸೊನಾಲಿ ಸಂಬಂಧಿ ವಿಜಯ್​ ಗೌಲಿ, ಕವಿತಾ ವಿರುದ್ದIPC ಸೆಕ್ಷನ್​​​​ 312, 313, 314, 304, PC-PNDT ಆ್ಯಕ್ಟ್​ 23ರಡಿ ಕೇಸ್​ ದಾಖಲಾಗಿದೆ ಎಂದು ಪ್ರಕರಣದ ಬಗ್ಗೆ ಬಾಗಲಕೋಟೆ SP ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್​ನನ್ನು​ ಅರೆಸ್ಟ್ ಮಾಡದೇ ಬೇರೆ ದಾರಿಯೇ ಇಲ್ಲ- ಡಾ.ಜಿ.ಪರಮೇಶ್ವರ್..! 

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here