Download Our App

Follow us

Home » ರಾಜ್ಯ » ಬೆಂಗಳೂರಿನ ಅರಮನೆ ಮೈದಾನ ಜಾಗ ವ್ಯಾಜ್ಯ ರೀ ಓಪನ್..!

ಬೆಂಗಳೂರಿನ ಅರಮನೆ ಮೈದಾನ ಜಾಗ ವ್ಯಾಜ್ಯ ರೀ ಓಪನ್..!

ಬೆಂಗಳೂರು : ಯದುವೀರ್ ಒಡೆಯರ್​ಗೆ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾದ ಮರು ದಿನವೇ ಬೆಂಗಳೂರಿನಲ್ಲಿರುವ ಮೈಸೂರು ಅರಮನೆ ಜಾಗ ಕುರಿತು ವ್ಯಾಜ್ಯ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ. ಹಾಗೆಯೇ ಇದರ ಜೊತೆಗೆ 545 ಸಬ್​ಇನ್​ಸ್ಪೆಕ್ಟರ್ ಹುದ್ದೆ ನೇಮಕ ಅಕ್ರಮ ತನಿಖೆಯನ್ನು SITಗೆ ವಹಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಬೆಂಗಳೂರಿನ ಅರಮನೆ ಮೈದಾನ ಜಾಗದ ವ್ಯಾಜ್ಯ ಬಹಳ ವರ್ಷಗಳಿಂದ ಸುಪ್ರೀಂಕೋರ್ಟ್​ನಲ್ಲಿದೆ. ಆ ಜಾಗವನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳುವ ಕುರಿತು ಬಲವಾದ ವಾದ ಮಂಡಿಸಲು ಪ್ರಬಲ ವಕೀಲರನ್ನು ನೇಮಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಹಾಗೆಯೇ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪೊಲೀಸ್ 545 ಸಬ್ ಇನ್​ಸ್ಪೆಕ್ಟರ್ ನೇಮಕ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ತಂಡ ರಚನೆಯಾಗಲಿದೆ.

ಏನಿದು ವಿವಾದ ? ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ನಾಲ್ಕು ಪಾಲು ಇದೆ. ಅವರ ಸಹೋದರಿಯರಿಗೆ ತಲಾ 28 ಎಕರೆ ಸೇರಿದೆ. ಓರ್ವ ಸಹೋದರಿಯ ಪುತ್ರರಾಗಿರುವ ಯದುವೀರ್​ಗೆ ಇನ್ನೂ ನೇರ ಹಕ್ಕು ಬಂದಿಲ್ಲ. ಅಲ್ಲದೆ ಪಾಲು ಹಂಚಿಕೆ ವಿಚಾರದಲ್ಲಿ ಶ್ರೀಕಂಠ ದತ್ತ ಒಡೆಯರ್ ವಿರುದ್ಧ ಅವರ ಸಹೋದರಿಯರು ಹೂಡಿರುವ ಪ್ರತ್ಯೇಕ ಪ್ರಕರಣ ನ್ಯಾಯಾಲಯದಲ್ಲಿದೆ. ಇವೆಲ್ಲದರ ಹೊರತಾಗಿ ಇಡೀ ಜಾಗ ಸರ್ಕಾರ ವಶಕ್ಕೆ ಪಡೆಯಲು ಕಾನೂನು ಮಾಡಿದ್ದು, ರಾಜ್ಯ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದು ಸರ್ಕಾರದ ಪರ ತೀರ್ಪು ಬಂದಿದೆ. ಬಳಿಕ ಒಡೆಯರ್ ಕುಟುಂಬ ಸುಪ್ರಿಂಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ ಬಳಿಕ ಸುಪ್ರಿಂಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ. ಹೀಗಾಗಿ ಒಡೆಯರ್ ಕುಟುಂಬದ ಹಿಡಿತದಲ್ಲೇ ಆ ಜಾಗ ಇದೆ.

ಇದನ್ನೂ ಓದಿ : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್ – ಮೂವರು ಆರೋಪಿಗಳಿಗೆ ಜಾಮೀನು ಮಂಜೂರು..!

ಸಂಪುಟದ ತೀರ್ಮಾನ ಏನು? ಬೆಂಗಳೂರು ಅರಮನೆ ಜಾಗದಲ್ಲಿ ರಸ್ತೆ ಅಗಲೀಕರಣ ಮಾಡುವುದಾದರೆ ಟಿಡಿಆರ್ ಕೊಡುವಂತೆ ಕೋರ್ಟ್ ಆದೇಶಿಸಿತ್ತು. ಆದರೆ ಸರ್ಕಾರ ರಸ್ತೆ ಅಗಲೀಕರಣದಿಂದ ಹಿಂದೆ ಸರಿಯಿತು. ಆದರೆ ರಸ್ತೆ ಅಗಲೀಕರಣಕ್ಕೆ ಅಗತ್ಯವಾದ ಹದಿನೈದೂವರೆ ಎಕರೆಯನ್ನು ತನ್ನ ವಶಕ್ಕೆ ಪಡೆದಿದ್ದ ಸರ್ಕಾರ ಕಾಂಪೌಂಡ್ ಹಾಕಿತ್ತು. ಸರ್ಕಾರ ಟಿಡಿಆರ್ ಕೊಟ್ಟು ರಸ್ತೆ ಅಭಿವೃದ್ಧಿಯನ್ನೂ ಮಾಡಲಿಲ್ಲ, ಬದಲಿಗೆ ಜಾಗವನ್ನು ವಶಕ್ಕೆ ಪಡೆದಿದೆ ಎಂದು ಒಡೆಯರ್ ಕುಟುಂಬ ನ್ಯಾಯಾಲಯಕ್ಕೆ ಮೊರೆ ಹೋಯಿತು. ಸರ್ಕಾರದ ನ್ಯಾಯಾಂಗ ನಿಂದನೆ ಮಾಡಿದಂತಾಗಿ, ಮುಖ್ಯಕಾರ್ಯದರ್ಶಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಖುದ್ದು ಹಾಜರಾತಿಗೆ ನ್ಯಾಯಾಲಯ ಸೂಚನೆ ನೀಡಿತ್ತು.

ಈ ವಿಚಾರ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚೆಯಾಯಾಗಿ, ಸರ್ಕಾರದ ನಿಲುವನ್ನು ಕೋರ್ಟ್​ಗೆ ತಿಳಿಸುವ ಸಂಬಂಧ ನಿರ್ಣಯಿಸಬೇಕಾಗಿತ್ತು. ಆ ಪ್ರಕಾರ ಚರ್ಚೆ ನಡೆದು, ರಸ್ತೆ ಅಗಲೀಕರಣ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಯಿತು. ಜತೆಗೆ ಹದಿನೈದೂವರೆ ಎಕರೆಗೆ ಟಿಡಿಆರ್ ಕೊಡಲು ತಾತ್ವಿಕ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಟಿಡಿಆರ್ ಯಾರಿಗೆ ಕೊಡಬೇಕೆಂಬುದು ಪ್ರಶ್ನೆ ಎದುರಾಯಿತು.ಕೊನೆಗೆ ಪ್ರಕರಣದ ಮೂಲ ಕೆದಕಿ, ಅರಮನೆ ಮೈದಾನದ ಜಾಗವನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಲು ಕಾನೂನು ರೂಪಿಸಿದೆ. ಅದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸುಪ್ರಿಂಕೋರ್ಟ್ ಯಥಾಸ್ಥಿತಿ ಸೂಚನೆ ನೀಡಿದೆ ಎಂಬ ಅಂಶವನ್ನು ಅಧಿಕಾರಿಗಳು ಪ್ರಸ್ತಾಪಿಸಿದರು. ಬಹುಕಾಲದಿಂದ ಯಥಾಸ್ಥಿತಿಯಲ್ಲಿರುವುದೇಕೆ ಎಂದು ಸಿಡಿಮಿಡಿಗೊಂಡ ಸಿಎಂ ಆ ಜಾಗ ನಾಡಿನ ಜನರಿಗೆ ಸೇರಬೇಕು, ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕು. ಹೀಗಾಗಿ ಸರ್ಕಾರದ ಪರ ಸುಪ್ರಿಂನಲ್ಲಿ ವಾದಿಸಲು ಕೂಡಲೇ ಪ್ರಬಲ ವಕೀಲರನ್ನು ನೇಮಿಸಿ ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್ – ಮೂವರು ಆರೋಪಿಗಳಿಗೆ ಜಾಮೀನು ಮಂಜೂರು..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here