Download Our App

Follow us

Home » ಮೆಟ್ರೋ » ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ – ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಕಂದಮ್ಮ ಸಾ*ವು..!

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ – ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಕಂದಮ್ಮ ಸಾ*ವು..!

ಬೆಂಗಳೂರು : ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಕಂದಮ್ಮ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಹೆಚ್.ಎಸ್.ಆರ್‌.ಲೇಔಟ್​ನ ಅಗರದಲ್ಲಿ ನಡೆದಿದೆ. ಅಪಘಾತ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಕಂದಮ್ಮ.

ಏಪ್ರಿಲ್ 21ರ ರಾತ್ರಿ 11 ಗಂಟೆ 26 ನಿಮಿಷಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂಬಂಧಿಗಳ ಮದುವೆ ಇದ್ದ ಕಾರಣ ಮೃತ ಶೈಹಾ ಜನ್ನತ್ ಕುಟುಂಬ ಸಮೇತವಾಗಿ ಚನ್ನಪಟ್ಟಣಕ್ಕೆ ಹೋಗಿದ್ರು.

ಕುಟುಂಬಸ್ಥರು ಮನೆಗೆ ವಾಪಾಸ್​​ ಆದಾಗ ರಾತ್ರಿಯಾಗಿತ್ತು. ಕಾರು ಗೇಟ್​ ಬಳಿ ನಿಲ್ಲಿಸಿ ಕುಟುಂಬಸ್ಥರು ಮನೆಯೊಳಗೆ ಹೋಗಿದ್ರು. ಮಗುವಿನ ತಂದೆ ಕಾರಿನಲ್ಲಿದ್ದ ಲಗೇಜ್ ಅನ್ನ ಮನೆಯೊಳಗೆ ಇಡ್ತಿದ್ರು. ಬಳಿಕ ಎಲ್ಲೋ ಹೋಗೋದಕ್ಕೆ ಮಗುವಿನ ತಂದೆ ರೆಡಿಯಾಗಿದ್ರು.

ಈ ವೇಳೆ ಕಾರು ಸ್ಟಾರ್ಟ್​ ಮಾಡೋಣ ಅನ್ನುವಷ್ಟರಲ್ಲಿ ಕಂದಮ್ಮ ಶೈಹಾ ಜನ್ನತ್ ಓಡೋಡಿ ಬಂದು ಕಾರ್​ನ ಡೋರ್​ ಬಳಿಯೇ ನಿಂತಿತ್ತು. ಮಗಳನ್ನ ಗಮನಿಸದೆ ಕಾರನ್ನ ಸ್ಟಾರ್ಟ್​​ ಮಾಡಿದ ಮಗುವಿನ ತಂದೆ ಮುಂದಕ್ಕೆ ಕಾರನ್ನು ಚಲಾಯಿಸಿದ್ದಾರೆ. ಆಗ ಕಾರಿನ ಚಕ್ರಕ್ಕೆ ಸಿಲುಕಿ ಕಂದಮ್ಮ ಸ್ಥಳದಲ್ಲೇ ಕೆನೆಯುಸಿರೆಳೆದಿದೆ. ಸದ್ಯ ಘಟನೆ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಸ್ಟಮ್ಸ್ ಅಧಿಕಾರಿಗಳ ಬೃಹತ್​ ಕಾರ್ಯಾಚರಣೆ – ಜೀವಂತ ಅನಕೊಂಡ ಹಾವುಗಳ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಅರೆಸ್ಟ್..!​

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here