ಬೆಂಗಳೂರು : ಪೊಲೀಸ್ ಕಾನ್ಸ್ಟೇಬಲ್ ಕೈಯಲ್ಲಿ ಐಪಿಎಸ್ ಅಧಿಕಾರಿ ಸತೀಶ್ ಕುಮಾರ್ ಅವರ ಸುಂದರ ಭಾವಚಿತ್ರ ಮೂಡಿಬಂದಿದೆ. ಹೌದು, ಐಪಿಎಸ್ ಅಧಿಕಾರಿ ಸತೀಶ್ ಕುಮಾರ್ ಅವರ ಸುಂದರ ಭಾವಚಿತ್ರವನ್ನು CAR ಕಾನ್ಸ್ಟೇಬಲ್ ಆಗಿರುವ ಕೃಷ್ಣ ಅವರು ಅದ್ಭುತವಾಗಿ ಬಿಡಿಸಿದ್ದಾರೆ.
IGP ಸತೀಶ್ ಕುಮಾರ್ ರವರ ಕಚೇರಿ ಸಹಾಯಕರಾಗಿರುವ CAR ಕಾನ್ಸ್ಟೇಬಲ್ ಕೃಷ್ಣ ಅವರು ಅಭಿಮಾನದಿಂದ ಚಿತ್ರ ರಚನೆ ಮಾಡಿ ಸತೀಶ್ ಕುಮಾರ್ ರವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಭಾವಚಿತ್ರ ನೋಡಿ IGP ಸತೀಶ್ ಕುಮಾರ್ ಅವರು ಕೃಷ್ಣ ಅವರಿಗೆ ಮನದಾಳದ ಧನ್ಯವಾದ ತಿಳಿಸಿದ್ದು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್ ಕುಮಾರ್ ಅವರು ತುಂಬಾ ಸರಳ ಹಾಗೂ ಸಜ್ಜನ IPS ಅಧಿಕಾರಿ ಅಂತಲೇ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಶಾಂತ್ ಎ. ತಿಮ್ಮಯ್ಯ ವಜಾ..!
Post Views: 432