Download Our App

Follow us

Home » ರಾಷ್ಟ್ರೀಯ » ಮೈ ಕೊರೆಯುವ ಕೂಲ್​ ಲೆಕ್ಕಿಸದೇ ಹೊರಗೆ ಹೋಗ್ತಿರಾ ಹುಷಾರ್ – ಚಳಿಯ ತೀವ್ರತೆಗೆ ಇಡೀ ಕುಟುಂಬವೇ ಬಲಿ!

ಮೈ ಕೊರೆಯುವ ಕೂಲ್​ ಲೆಕ್ಕಿಸದೇ ಹೊರಗೆ ಹೋಗ್ತಿರಾ ಹುಷಾರ್ – ಚಳಿಯ ತೀವ್ರತೆಗೆ ಇಡೀ ಕುಟುಂಬವೇ ಬಲಿ!

ಶ್ರೀನಗರ : ದೇಶದಲ್ಲಿ ದಿನೇ ದಿನೇ ವಾತಾವರಣ ಏರುಪೇರು ಆಗುತ್ತಿದ್ದು ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಿಪರೀತ ಚಳಿ ತಡೆಯದೇ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಜಮ್ಮು ಕಾಶ್ಮೀರದ ಶ್ರೀನಗರ ಜಿಲ್ಲೆಯ ಪಂದ್ರಾಥಾನ್ ಎಂಬ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಮೂಲತಃ ಬಾರಾಮುಲ್ಲಾ ಜಿಲ್ಲೆಯವರು ಎನ್ನಲಾಗಿದ್ದು, ದಂಪತಿ ಸೇರಿದಂತೆ 3 ಮಕ್ಕಳು ಸೇರಿ ಒಟ್ಟು ಐವರು ಸಾವನ್ನಪ್ಪಿದ್ದಾರೆ. ಏಜಾಜ್ ಅಹ್ಮದ್ ಭಟ್ (38), ಅವರ ಪತ್ನಿ ಸಲೀಮಾ (32), ಮತ್ತು ಅವರ ಮೂವರು ಮಕ್ಕಳು-ಆರೀಬ್ (3), ಹಮ್ಜಾ (18 ತಿಂಗಳು), ಮತ್ತು ಒಂದು ತಿಂಗಳ ಮಗು ಎಂದು ಗುರುತಿಸಲಾಗಿದೆ.

ಬಾರಮುಲ್ಲಾ ಜಿಲ್ಲೆಯಿಂದ ಬಂದಿದ್ದ ಕುಟುಂಬ ಪಂದ್ರಾಥಾನ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶ್ರೀನಗರದಲ್ಲಿ ಚಳಿ ಹೆಚ್ಚಿದ್ದು ಚಳಿಯ ಪರಿಣಾಮದಿಂದ ಉಸಿರುಗಟ್ಟಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಸ್ಥಳೀಯರು ತಕ್ಷಣವೇ ಕುಟುಂಬಸ್ಥರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆಸ್ಪತ್ರೆ ರವಾನಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದುಃಖ ವ್ಯಕ್ತಪಡಿಸಿದ್ದು, ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಇಂತಹ ದುರಂತ ಘಟನೆಗಳನ್ನು ತಡೆಗಟ್ಟಲು ಬಿಸಿ ಉಪಕರಣಗಳ ಸುರಕ್ಷಿತ ಬಳಕೆಯ ಕುರಿತು ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸುವ ಮಹತ್ವವನ್ನು ಒತ್ತಿ ಹೇಳಿದರು. ಚಳಿಗಾಲದ ವಿಪರೀತ ಚಳಿಯಲ್ಲಿ, ಜನರು ಕೆಲವೊಮ್ಮೆ ತಮ್ಮ ಕೊಠಡಿಗಳಲ್ಲಿ LPG ಹೀಟರ್‌ಗಳನ್ನು ವಿವೇಚನೆಯಿಲ್ಲದೆ ಬಳಸುತ್ತಾರೆ.

ಒಮರ್ ಅಬ್ದುಲ್ಲಾ, ಸಿಎಂ
ಒಮರ್ ಅಬ್ದುಲ್ಲಾ, ಸಿಎಂ

ಈ ಅನಿಲ ಶಾಖೋತ್ಪಾದಕಗಳು ಕಾರ್ಬನ್ ಮಾನಾಕ್ಸೈಡ್ ಅನ್ನು ಉತ್ಪಾದಿಸುತ್ತವೆ , ಹಾಗಾಗಿ ಸಂಪೂರ್ಣವಾಗಿ ಮುಚ್ಚಿದ ಕೋಣೆಯಲ್ಲಿ, ತಾಜಾ ಗಾಳಿ ಪ್ರವೇಶಿಸಿದ ಕಾರಣ ಅಂತಹ ಉಪಕರಣಗಳು ಅಪಾಯಕಾರಿಯಾಗುತ್ತವೆ ಎಂದು ಹೇಳಿದ್ದಾರೆ. ಹಾಗಾಗಿ ಎಚ್ಚರಿಕೆ ವಹಿಸಿ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಚೀನಿ ವೈರಸ್​ ಪತ್ತೆ – ತುರ್ತು ಸಭೆ ಕರೆದ ರಾಜ್ಯ ಸರ್ಕಾರ..!

Leave a Comment

DG Ad

RELATED LATEST NEWS

Top Headlines

ಇಬ್ರಾಹಿಂ ಅಲಿ ಖಾನ್ ಜೊತೆ ಶ್ರೀಲೀಲಾ ಮಿಂಚಿಂಗ್​​ – ಬಾಲಿವುಡ್‌ಗೆ ಹಾರಿದ್ರಾ ಕನ್ನಡದ ಚೆಲುವೆ ?

ಮುಂಬೈ : ಕನ್ನಡದ ನಟಿ ಶ್ರೀಲೀಲಾ ಅವರು ಸೂಪರ್​ ಹಿಟ್​ ‘ಪುಷ್ಪ 2’ ಚಿತ್ರದಲ್ಲಿ ಕಿಸ್ಸಿಕ್ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ಗೆ ಪಾದಾರ್ಪಣೆ

Live Cricket

Add Your Heading Text Here