Download Our App

Follow us

Home » ಅಪರಾಧ » ಶಾಸಕ ಮುನಿರತ್ನ ನನ್ನ ಬಳಿ 30 ಲಕ್ಷ ಲಂಚ ಕೇಳಿ ಪ್ರಾಣ ಬೆದರಿಕೆ ಹಾಕಿದ್ದಾರೆ – BBMP ಕಾಂಟ್ರಾಕ್ಟರ್ ಗಂಭೀರ​​ ಆರೋಪ..!

ಶಾಸಕ ಮುನಿರತ್ನ ನನ್ನ ಬಳಿ 30 ಲಕ್ಷ ಲಂಚ ಕೇಳಿ ಪ್ರಾಣ ಬೆದರಿಕೆ ಹಾಕಿದ್ದಾರೆ – BBMP ಕಾಂಟ್ರಾಕ್ಟರ್ ಗಂಭೀರ​​ ಆರೋಪ..!

ಬೆಂಗಳೂರು : RR ನಗರ ಶಾಸಕ‌ ಮುನಿರತ್ನ ವಿರುದ್ದ BBMP ಕಾಂಟ್ರ್ಯಾಕ್ಟರ್​ ಚಲುವರಾಜು ಎಂಬವರು ಸ್ಫೋಟಕ ಆರೋಪ ಮಾಡಿದ್ದಾರೆ.​ ಶಾಸಕ‌ ಮುನಿರತ್ನ ಅವರು ಲಂಚದ ಹಣ ನೀಡುವಂತೆ ನನಗೆ ಕಿರುಕಳ ನೀಡಿದ್ದಾರೆ. 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಾಂಟ್ರ್ಯಾಕ್ಟರ್ ಚಲುವರಾಜು ಗಂಭೀರ​ ಆರೋಪ ಮಾಡಿದ್ದಾರೆ.

ಮುನಿರತ್ನ ಅವರು ವೈಯ್ಯಾಲಿಕಾವಲ್ ಮನೆಗೆ ಕರೆಸಿ ನನ್ನ ಬಳಿ ಲಂಚ ಕೇಳಿದ್ದಾರೆ. ನಾನು ಮುನಿರತ್ನ ಗನ್​ಮ್ಯಾನ್​ ವಿಜಯ್​ಕುಮಾರ್ ಅವರಿಗೆ 20 ಲಕ್ಷ ಕೊಟ್ಟಿದ್ದೇನೆ. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಪ್ರದೇಶದ ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ಸಂಬಂಧ ಮುನಿರತ್ನ ಪ್ರತಿ ತಿಂಗಳು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಪ್ರತಿ ತಿಂಗಳು 1 ಲಕ್ಷದಂತೆ 36 ಲಕ್ಷ ಲಂಚಕ್ಕೆ ಮುನಿರತ್ನ ಲಂಚ ಕೇಳಿದ್ಧಾರೆ.

ಕಸದ ಆಟೋ ಕೊಡಿಸುತ್ತೇನೆ ಎಂದು ಮೊದಲು 20 ಲಕ್ಷ ಕೇಳಿದ್ದರು. ಆಟೋಗಾಗಿ ನಾನು ಸಾಲ ಮಾಡಿ ಮುನಿರತ್ನ ಅವರಿಗೆ 20 ಲಕ್ಷ ಕೊಟ್ಟಿದ್ದೆ. ಆದರೆ ಬರೀ ಶಿಫಾರಸ್ಸು ಪತ್ರ ನೀಡಿ ಮುನಿರತ್ನ ನನಗೆ ವಂಚಿಸಿದ್ದಾರೆ. ಮತ್ತೆ ಘನತ್ಯಾಜ್ಯ ಅಧಿಕಾರಿಗಳು MLA ಗೃಹಕಚೇರಿಗೆ ಮೀಟಿಂಗ್ ಕರೆದ್ರು, ಮೀಟಿಂಗ್ ಮುಗಿದ ಬಳಿಕ ಮುನಿರತ್ನ ಅವರು ಎಲ್ಲೋ ಮಾಮೂಲಿ ಅಂತ ಕೇಳಿದ್ರು, ಆಗ ನಾನು ಕಷ್ಟದಲ್ಲಿದ್ದೇನೆ.. ಎಲ್ಲಿಂದ ಕೊಡಲಿ ಎಂದು ಮುನಿರತ್ನ ಅವರಿಗೆ ಹೇಳಿದೆ. ಆಗ ಮನಿರತ್ನಅವರು ನನ್ನನ್ನು ಅವಾಚ್ಯ ಶಬ್ಧಗಳಿಂದ ಬೈದರು ಎಂದು BBMP ಕಾಂಟ್ರ್ಯಾಕ್ಟರ್​ ಚಲುವರಾಜು ಆರೋಪಿಸಿದ್ದಾರೆ.

ನನ್ನ ಗುತ್ತಿಗೆ ರದ್ದುಪಡಿಸಿ ಬೇರೆಯವರಿಗೆ ಕೊಡುವುದಾಗಿ ಮನಿರತ್ನ ಅವರು ಹೇಳಿದ್ರು, BBMP ಆಯುಕ್ತರಿಗೆ ಈ ಬಗ್ಗೆ ಪತ್ರ ಬರೆಯುವಂತೆ ಸಹಾಯಕರಿಗೆ ಸೂಚಿಸಿದ್ದರು. ಬೋXXX ಮಗನೇ XXX ಎಲ್ಲಿಂದಾದ್ರೂ ಸಾಲ ಮಾಡಿ ಹಣ ಕೊಡು. ಹೀಗೆಲ್ಲಾ ನನ್ನನ್ನು ಮತ್ತು ಕುಟುಂಬವನ್ನು ಅವಾಚ್ಯವಾಗಿ ಮುನಿರತ್ನ ಅವರು ನಿಂದಿದ್ದಾರೆ. ಮತ್ತೆ ಸೆಪ್ಟಂಬರ್ 2023ರಲ್ಲಿ ಮನೆಗೆ ಕರೆದು 30 ಲಕ್ಷ ಲಂಚ ಕೇಳಿದ್ದಾರೆ.

ನಾನು 15 ಲಕ್ಷ ಆದರೆ ಸಾಲ ಮಾಡಿ ಕೊಡುತ್ತೇನೆ 30 ಆಗಲ್ಲ ಎಂದು ಬಂದಿದ್ದೆ. ಮತ್ತೆ ಮನೆಗೆ ಕರೆಸಿಕೊಂಡು ನನ್ನ ಮುಖಕ್ಕೆ ಹೊಡೆದು ಹಣ ಕೇಳಿದ್ದಾರೆ. ನಾನು ಹಣ ಕೊಡದೇ ಇರೋದ್ರಿಂದ ಗುತ್ತಿಗೆ ರದ್ದು ಮಾಡಲು ಪತ್ರ ಬರೆದಿದ್ದಾರೆ. ಅಷ್ಟಾದರೂ ಬಿಡದೆ ನನ್ನ ಪತ್ನಿ ಬಗ್ಗೆಯೂ ಅತ್ಯಂತ ಕೆಟ್ಟದ್ದಾಗಿ ಮಾತಾಡಿದ್ದಾರೆ. ನಿನ್ನ ಸುಮ್ನೆ ಬಿಡಲ್ಲ, ಕತೆ ಮುಗಿಸ್ತೀನಿ XXಮಗನೇ ಅಂತ ಬೆದರಿಕೆ ಹಾಕಿದ್ದಾರೆ. ತಲೆಗೆ ಹೊಡೆದು ಕಳಿಸಿದ್ದಾರೆ ಎಂದು ಚಲುವರಾಜು ಗಂಭೀರ ಆರೋಪ ಮಾಡಿದ್ದಾರೆ. ಮುನಿರತ್ನ ಬೈದಿದ್ದಾರೆ ಎನ್ನಲಾದ ಐದು ಆಡಿಯೋವನ್ನು ಸಹ ಚಲುವರಾಜು ರಿಲೀಸ್ ಮಾಡಿದ್ದಾರೆ.

ಇದನ್ನೂ ಓದಿ : ಈದ್​​ಮಿಲಾದ್​ಗೆ ಟೈಟ್ ಸೆಕ್ಯೂರಿಟಿ : ಡಿಜೆ ಬಳಸುವಂತಿಲ್ಲ, ಹರಿತವಾದ ಆಯುಧ ಇಟ್ಟುಕೊಳ್ಳುವಂತಿಲ್ಲ – ಕಮಿಷನರ್​​ ಖಡಕ್​​​​ ಸೂಚನೆ..!

Leave a Comment

DG Ad

RELATED LATEST NEWS

Top Headlines

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ FIR ದಾಖಲು – ಕಾರಣ?

ಬೆಂಗಳೂರು : ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನೋಹರ್ ನೀಡಿದ

Live Cricket

Add Your Heading Text Here