ಬೆಂಗಳೂರು : ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ. ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜೆ.ಪಿ.ನಗರದ 3ನೇ ಹಂತದಲ್ಲಿ ಬೆಳಗ್ಗೆ ಆರು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 48 ವರ್ಷದ ಸುಕನ್ಯ, 28 ನಿಖಿತ್, 28 ವರ್ಷದ ನಿಶ್ಚಿತ್ ಸಾವನ್ನಪ್ಪಿದ್ದಾರೆ. ಸಾಲದ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.
ಮನೆಯಲ್ಲಿ ಜಯಾನಂದ್, ಸುಕನ್ಯಾ, ನಿಶ್ಚಿತ್, ನಿಕಿತ್ ವಾಸವಿದ್ದರು. ಜಯಾನಂದ್ ನಡೆಸುತ್ತಿದ್ದ ಫ್ಯಾಕ್ಟರಿ ಲಾಸ್ನಿಂದ ಕ್ಲೋಸ್ ಆಗಿತ್ತು, ಹಾಗಾಗಿ ಕುಟುಂಬ ಸಾಕಷ್ಟು ಸಾಲ ಮಾಡಿಕೊಂಡಿತ್ತು. ಜೀವನ ನಿರ್ವಹಣೆಗಾಗಿ ಸುಕನ್ಯ ಮನೆಯಲ್ಲಿ ಟ್ಯೂಷನ್ ಕೊಡ್ತಿದ್ದರು. ಆಕೆಯ ಗಂಡ ಬ್ಯುಸಿನೆಸ್ ಲಾಸ್ ಆಗಿ ಆನಾರೋಗ್ಯಕ್ಕೊಳಗಾಗಿದ್ರು. ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ನಿಶ್ಚಿತ್ ವಿಶೇಷ ಚೇತನನಾಗಿದ್ದು, ಇನ್ನೊಬ್ಬ ಮಗ ನಿಖಿತ್ ನಾಲ್ಕೈದು ತಿಂಗಳಿನಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ.
ಸಾಲ ಜಾಸ್ತಿಯಾಗಿ ಸಾಲಗಾರರು ಮನೆಗೆ ಬಂದು ಕೇಳ್ತಿದ್ರು, ನಿನ್ನೇ ಕೂಡ ಇಬ್ಬರು ಬಂದು ಸಾಲ ವಾಪಸ್ ಕೇಳಿದ್ರು. ಹಾಗಾಗಿ ಸಾಲದ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಜೆಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ : ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಂದ ರಿಲೀಸ್ ಆಯ್ತು ‘ದೇಸಾಯಿ’ ಚಿತ್ರದ ಟೀಸರ್..!