Download Our App

Follow us

Home » ಮೆಟ್ರೋ » ಬೆಂಗಳೂರು ವಾಟರ್​​ ಟ್ಯಾಂಕರ್​ ಲೂಟಿಗೆ ಬ್ರೇಕ್​​​ : ಖಾಸಗಿ ಟ್ಯಾಂಕರ್​ಗಳಿಗೆ ರೇಟ್​ ಫಿಕ್ಸ್​ ಮಾಡಿದ ಜಿಲ್ಲಾಡಳಿತ..!

ಬೆಂಗಳೂರು ವಾಟರ್​​ ಟ್ಯಾಂಕರ್​ ಲೂಟಿಗೆ ಬ್ರೇಕ್​​​ : ಖಾಸಗಿ ಟ್ಯಾಂಕರ್​ಗಳಿಗೆ ರೇಟ್​ ಫಿಕ್ಸ್​ ಮಾಡಿದ ಜಿಲ್ಲಾಡಳಿತ..!

ಬೆಂಗಳೂರು : ಬೆಂಗಳೂರು ವಾಟರ್​​ ಟ್ಯಾಂಕರ್​ ಲೂಟಿಗೆ ಜಿಲ್ಲಾಡಳಿತ ಬ್ರೇಕ್​​​ ಹಾಕಿದೆ. ಖಾಸಗಿ ಟ್ಯಾಂಕರ್​ಗಳಿಗೆ ರೇಟ್​ ಫಿಕ್ಸ್​ ಮಾಡಿದ್ದು, BBMP, BWSSBಯಿಂದ ದರ ನಿಗದಿಗೆ ಮನವಿ ಮಾಡಲಾಗಿತ್ತು. ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಲ್ಲಿ ನೀರಿನ ಕೊರತೆಯಿದೆ.

ನೀರಿನ ಕೊರತೆಯನ್ನೇ ಖಾಸಗಿ ಟ್ಯಾಂಕರ್ಸ್​ ಬಂಡವಾಳ ಮಾಡಿಕೊಂಡಿದೆ. ಇದೀಗ ವಾಟರ್ ಟ್ಯಾಂಕರ್ ಮಾಫಿಯಾಗೆ ಬೆಂಗಳೂರು ನಗರ ಜಿಲ್ಲಾಡಳಿತ ಕಡಿವಾಣ ಹಾಕಿದೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಆಧರಿಸಿ ನಗರದ ಡಿಸಿ ರೇಟ್​​ ಫಿಕ್ಸ್ ಮಾಡಿದ್ದಾರೆ. ನಾಲ್ಕು ತಿಂಗಳ ಅವಧಿಗೆ 200 ಖಾಸಗಿ ಟ್ಯಾಂಕರ್​ಗಳಿಗೆ ದರ ನಿಗದಿಯಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದರಿಂದ ರೇಟ್​ ಫಿಕ್ಸ್​ ಮಾಡಿದ್ದು, ನೀರು ಸರಬರಾಜು ಮಾಡಲು 200 ಖಾಸಗಿ ಟ್ಯಾಂಕರ್ ಗುತ್ತಿಗೆ ಮೇಲೆ ಬಳಕೆಯಾಗುತ್ತಿದೆ. ಹಾಗಾಗಿ ಜನರು ಖಾಸಗಿ ಟ್ಯಾಂಕರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ಯಾಂಕರ್​ಗಳಿಗೆ ರೇಟ್​ ಫಿಕ್ಸ್ :​

  • 5 ಕಿ.ಮೀ. ವ್ಯಾಪ್ತಿಯಲ್ಲಿ 6000 ಲೀಟರ್ ಟ್ಯಾಂಕರ್​​ಗೆ 600 ರೂ.
  • 8000 ಲೀಟರ್ ವಾಟರ್ ಟ್ಯಾಂಕರ್​ಗೆ 700 ರೂ.
  • 12000 ಲೀಟರ್ ವಾಟರ್ ಟ್ಯಾಂಕರ್​ಗೆ 1000 ರೂ.
  • 5 ಕಿಮೀನಿಂದ 10 ಕಿಮೀ ಒಳಗೆ ಬೇರೆ ರೇಟ್​ ಫಿಕ್ಸ್​
  • 6000 ಲೀಟರ್ ವಾಟರ್ ಟ್ಯಾಂಕರ್​ಗೆ 750 ರೂ.
  • 8000 ಲೀಟರ್ ವಾಟರ್ ಟ್ಯಾಂಕರ್​​​ 850 ರೂ.
  • 12000 ಲೀಟರ್ ವಾಟರ್ ಟ್ಯಾಂಕರ್​ಗೆ 1200 ರೂ.
  • GST ಅನ್ವಯ ಆಗುವಂತೆ ದರ ನಿಗದಿಪಡಿಸಿದ ಡಿಸಿ

ಇದನ್ನೂ ಓದಿ : ಧಾರವಾಡದಲ್ಲಿ ಮದುವೆ ಮನೆಗೆ ನುಗ್ಗಿ ಕಳವು : ವಜ್ರ, ಚಿನ್ನ ಸಹಿತ ಹಣವಿದ್ದ ಬ್ಯಾಗ್​ ದೋಚಿದ ಕಳ್ಳರು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here