Download Our App

Follow us

Home » ಜಿಲ್ಲೆ » ಬೆಂಗಳೂರಿನ ಟೌನ್​​ ಹಾಲ್​ ಮುಂಭಾಗ ಹೈಡ್ರಾಮಾ – ಗಣೇಶ ಮೂರ್ತಿ ಸಮೇತ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ..!

ಬೆಂಗಳೂರಿನ ಟೌನ್​​ ಹಾಲ್​ ಮುಂಭಾಗ ಹೈಡ್ರಾಮಾ – ಗಣೇಶ ಮೂರ್ತಿ ಸಮೇತ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ..!

ಬೆಂಗಳೂರು : ನಾಗಮಂಗಲ ನಗರದಲ್ಲಿ ಬುಧವಾರ ರಾತ್ರಿ ಗಣಪತಿ ವಿಸರ್ಜನೆಯ ಮೆರವಣಿಗೆ ಮೇಲೆ ನಡೆಸಿದ ದಾಳಿ ಖಂಡಿಸಿ ಇಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ಟೌನ್​​ ಹಾಲ್​ ಮುಂಭಾಗ ಪ್ರತಿಭಟನೆ ನಡೆಸಿದವು. ಈ ವೇಳೆ ಪೊಲೀಸರು ಗಣೇಶ ಮೂರ್ತಿ ಸಮೇತ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅನುಮತಿ ಪಡೆಯದೇ ಟೌನ್​ ಹಾಲ್​ ಮುಂಭಾಗ ಪ್ರೊಟೆಸ್ಟ್ ನಡೆಸುತ್ತಿದ್ದರು. ಗಣೇಶನ ಮೂರ್ತಿ ತಂದು ಪ್ರತಿಭಟನೆ ಮಾಡ್ತಿದ್ದ ಕಾರ್ಯಕರ್ತರು ನಾಗಮಂಗಲದಲ್ಲಿ ಬೆಂಕಿ ಹಚ್ಚಿದವರನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನಾಕಾರರನ್ನು ತೆರವು ಮಾಡಲು ಪೊಲೀಸರು ಬಂದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು, ಕೈನಲ್ಲಿ ಗಣೇಶ ಮೂರ್ತಿ ಹಿಡಿದು ವಾಗ್ವಾದಕ್ಕಿದ್ದಾರೆ. ಗಣೇಶ ಮೂರ್ತಿಗಳ ತಳ್ಳಾಟ-ನೂಕಾಟದ ಮಧ್ಯೆ ಪೊಲೀಸರು ಕೊನೆಗೆ ಗಣೇಶ ಮೂರ್ತಿ ಸಮೇತ ಕಾರ್ಯಕರ್ತರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ನಾಗಮಂಗಲ ಗಲಭೆಯಲ್ಲಿ ಇನ್ಸ್​ಪೆಕ್ಟರ್​​​ ನಿರ್ಲಕ್ಷ್ಯ ಕಾಣುತ್ತಿದೆ – ಸಚಿವ ಡಾ.ಜಿ ಪರಮೇಶ್ವರ್..!

Leave a Comment

DG Ad

RELATED LATEST NEWS

Top Headlines

ತಾಯಿಗೆ ಮರು ಪ್ರೀತಿ, ಹೊಸ ಜೀವನ.. ಹೆತ್ತಮ್ಮನಿಗೇ 2ನೇ ಮದುವೆ ಮಾಡಿಸಿದ ಪುತ್ರ..!

ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ತಾಯಿಗೆ ಮಗನೇ ಮುಂದೆ ನಿಂತು ಮದುವೆ ಮಾಡಿಸಿದ ಅಚ್ಚರಿಯ ಘಟನೆಯೊಂದು ನಡೆದಿದೆ. 18 ವರ್ಷ ತಾಯಿ ಜೊತೆಗಿದ್ದ ಮಗ ಅಬ್ದುಲ್ ಅಹಾದ್ ಬಹಳ

Live Cricket

Add Your Heading Text Here