ಬೆಂಗಳೂರು : ನಾಗಮಂಗಲ ಗಲಭೆಯಲ್ಲಿ ಇನ್ಸ್ಪೆಕ್ಟರ್ ನಿರ್ಲಕ್ಷ್ಯ ಕಾಣುತ್ತಿದೆ, ಹೀಗಾಗಿ ಇನ್ಸ್ಪೆಕ್ಟರ್ ಸಸ್ಪೆಂಡ್ ಮಾಡಲಾಗಿದೆ. ಗಣೇಶನ ಮೆರವಣಿಗೆಗೆ ಕೊಟ್ಟಿದ್ದ ರೂಟ್ ಚೇಂಜ್ ಮಾಡಲಾಗಿದೆ,
ಆದರೂ ಇನ್ಸ್ಪೆಕ್ಟರ್ ಯಾವುದೇ ಮುಂಜಾಗ್ರತೆ ವಹಿಸಿಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾನೂನು ಸುವ್ಯವಸ್ಥೆ ADGP ಸೇರಿ ಎಲ್ಲರೂ ಸೂಚನೆ ನೀಡಿದ್ರು. ತನಿಖೆ ಮಾಡಿ ವರದಿ ಕೊಡುವಂತೆ ಹಿರಿಯ ಅಧಿಕಾರಿಗಳಿಗೆ ಹೇಳಿದ್ದೇನೆ, ಕಾನೂನಿನ ಚೌಕಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತಗೆದುಕೊಳ್ತೇವೆ. ನನಗೆ ಬಿಜೆಪಿ ನಾಯಕರಿಂದ ಸರ್ಟಿಫಿಕೇಟ್ ಬೇಕಿಲ್ಲ, ಆಕಸ್ಮಿಕ ಮಂತ್ರಿ ಎಂದಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ನಾನು ಜವಬ್ದಾರಿ ಇಲ್ಲದೇ ಈ ಸ್ಥಾನದಲ್ಲಿ ಕೂತಿಲ್ಲ, ಈ ಘಟನೆಯನ್ನು ನಾವು ಸಮರ್ಥನೆ ಮಾಡ್ಕೋತಿಲ್ಲ. ಈಗಾಗಲೇ ಯಾರ್ಯಾರು ಭಾಗಿಯಾಗಿದ್ದಾರೋ ಅವ್ರನ್ನು ಬಂಧಿಸಿದ್ದೇವೆ, ರಾಜಕೀಯ ಮಾಡಬೇಡಿ ಅಂತಾ ಮನವಿ ಮಾಡಿದ್ರೂ, ಮಾಡ್ತಾರೆ, ಮಾನದಂಡ ನೋಡಿ ಪರಿಹಾರದ ಬಗ್ಗೆ ನಿರ್ಧರಿಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಕಬಾಬ್ ಸೆಂಟರ್ ಎಡವಟ್ಟು – ಕ್ಷಣಾರ್ಧದಲ್ಲಿ ಆಟೋ, ಬೈಕ್ ಸುಟ್ಟು ಕರಕಲು..!