ಬೆಂಗಳೂರು : ನಾಗಮಂಗಲ ನಗರದಲ್ಲಿ ಬುಧವಾರ ರಾತ್ರಿ ಗಣಪತಿ ವಿಸರ್ಜನೆಯ ಮೆರವಣಿಗೆ ಮೇಲೆ ನಡೆಸಿದ ದಾಳಿ ಖಂಡಿಸಿ ಇಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದವು. ಈ ವೇಳೆ ಪೊಲೀಸರು ಗಣೇಶ ಮೂರ್ತಿ ಸಮೇತ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅನುಮತಿ ಪಡೆಯದೇ ಟೌನ್ ಹಾಲ್ ಮುಂಭಾಗ ಪ್ರೊಟೆಸ್ಟ್ ನಡೆಸುತ್ತಿದ್ದರು. ಗಣೇಶನ ಮೂರ್ತಿ ತಂದು ಪ್ರತಿಭಟನೆ ಮಾಡ್ತಿದ್ದ ಕಾರ್ಯಕರ್ತರು ನಾಗಮಂಗಲದಲ್ಲಿ ಬೆಂಕಿ ಹಚ್ಚಿದವರನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನಾಕಾರರನ್ನು ತೆರವು ಮಾಡಲು ಪೊಲೀಸರು ಬಂದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು, ಕೈನಲ್ಲಿ ಗಣೇಶ ಮೂರ್ತಿ ಹಿಡಿದು ವಾಗ್ವಾದಕ್ಕಿದ್ದಾರೆ. ಗಣೇಶ ಮೂರ್ತಿಗಳ ತಳ್ಳಾಟ-ನೂಕಾಟದ ಮಧ್ಯೆ ಪೊಲೀಸರು ಕೊನೆಗೆ ಗಣೇಶ ಮೂರ್ತಿ ಸಮೇತ ಕಾರ್ಯಕರ್ತರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ನಾಗಮಂಗಲ ಗಲಭೆಯಲ್ಲಿ ಇನ್ಸ್ಪೆಕ್ಟರ್ ನಿರ್ಲಕ್ಷ್ಯ ಕಾಣುತ್ತಿದೆ – ಸಚಿವ ಡಾ.ಜಿ ಪರಮೇಶ್ವರ್..!