Download Our App

Follow us

Home » ಅಪರಾಧ » ಬೆಂಗಳೂರು ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ – ರೌಡಿಗಳಿಗೆ ಗನ್​, ಗುಂಡುಗಳನ್ನು ಪೂರೈಸುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್..!

ಬೆಂಗಳೂರು ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ – ರೌಡಿಗಳಿಗೆ ಗನ್​, ಗುಂಡುಗಳನ್ನು ಪೂರೈಸುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್..!

ಬೆಂಗಳೂರು : ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ನಗರದ ರೌಡಿಗಳಿಗೆ ಗನ್​ ಹಾಗೂ ಜೀವಂತ ಗುಂಡುಗಳನ್ನು ಪೂರೈಸುತ್ತಿದ್ದ ಮಹಾರಾಷ್ಟ್ರದ ಇಬ್ಬರನ್ನು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಕಾರ್ಯಚರಣೆಯಲ್ಲಿ ರಾಹುಲ್ ಸತೀಶ್​​ ಮಾನೆ ಹಾಗೂ ಮಲ್ಲಿಕ್​ನನ್ನು ಅರೆಸ್ಟ್​ ಮಾಡಿದ್ದು, ಬಂಧಿತರಿಂದ ಎರಡು ಗನ್​​​, ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಗನ್​ ಹಾಗೂ ಗುಂಡುಗಳು ಬಾಂಬೆಯಿಂದ ಬೆಂಗಳೂರಿಗೆ ಸರಬರಾಜು ಆಗ್ತಿದ್ದವು. ತದನಂತರ ನಗರದ ರೌಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಗನ್​ ಹಾಗೂ ಗುಂಡುಗಳನ್ನು ಜಾನ್ಞಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರಾಟಕ್ಕೆ ಯತ್ನ ಮಾಡಿದ್ದು, ಸಿಸಿಬಿ ಪೊಲೀಸರ ಸಮಯ ಪ್ರಜ್ಞೆಯಿಂದ ಆರೋಪಿಗಳು ಲಾಕ್ ಆಗಿದ್ದಾರೆ.

ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದು, ಈ ಹಿಂದೆ ಆರೋಪಿಗಳು ಕೇಸ್ ಒಂದರಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಈ ವೇಳೆ ನಗರದ ಹಲವಾರು ರೌಡಿಗಳಿಗೆ ವೆಪನ್ಸ್ ಡೀಲರ್ಸ್ ಪರಿಚಯವಾಗಿದ್ದರು. ಹೀಗಾಗಿ ಜೈಲಿನಿಂದ ಹೊರಬಂದ ಬಳಿಕ ರೌಡಿಗಳ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಬೆಂಗಳೂರು ರೌಡಿಸಂಗೆ ವೆಪನ್ಸ್​ಗಳು ಬೇಕು ಎಂಬ ಬೇಡಿಕೆ ಹಿನ್ನೆಲೆ ರೌಡಿಗಳಿಗೆ ಗನ್ ಸಪ್ಲೈ ಮಾಡಲಿಕ್ಕೆ ಗನ್ ಗಳನ್ನ ಬಾಂಬೆಯಿಂದ ತರಿಸಲಾಗಿತ್ತು. ಗುಂಡು ಮತ್ತು ಗನ್ ​ಗಳನ್ನು ಯಾರಿಗೆ ತಲುಪಿಸಲು ಮುಂದಾಗಿದ್ದರು ಎಂದು ಸಿಸಿಬಿ ಪೊಲೀಸರು ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮಧ್ಯರಾತ್ರಿ 11 ಗಂಟೆಯಿಂದ ಲಾರಿ ಮುಷ್ಕರ ಆರಂಭ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here