ಅಹಮದಾಬಾದ್ : 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ.
ಈ ಬೆನ್ನಲ್ಲೇ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಫುಲ್ ಖುಷಿಯಾಗಿದ್ದು, ತಂಡವನ್ನು ಅಭಿನಂದಿಸಿದ್ದಾರೆ. ಸೋಶಿಯಲ್ ಮೀಡಿಯಾ ವೇದಿಕೆ Xನಲ್ಲಿ ಈ ಕುರಿತು ಬರೆದುಕೊಂಡಿರುವ ಮಲ್ಯ, 18 ವರ್ಷಗಳ ನಂತರ RCB ಅಂತಿಮವಾಗಿ IPL ಚಾಂಪಿಯನ್ ಆಗಿದೆ. ಐಪಿಎಲ್ ಶುರುವಾದಗಿಂದ ಇಲ್ಲಿಯವರೆಗೆ ಆರ್‌ಸಿಬಿ ಉತ್ತಮ ಅಭಿಯಾನ ಮಾಡಿದೆ. ಟ್ರೋಫಿ ಗೆದ್ದ ನಿಮಗೆ ಅನಂತ ಅಭಿನಂದನೆಗಳು! ಈ ಸಲ ಕಪ್ ನಮ್ದೇ!! ಎಂದು ಮಲ್ಯ ಬರೆದುಕೊಂಡಿದ್ದಾರೆ.
ಇನ್ನು ಐಪಿಎಲ್ 2025ರ ಚಾಂಪಿಯನ್ ಆಗಿರುವ ಆರ್‌ಸಿಬಿಗೆ 20 ಕೋಟಿ ರೂಪಾಯಿ ಹಣ ಬಹುಮಾನವಾಗಿ ನೀಡಲಾಗಿದೆ. ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು. ಸೋತ ತಂಡ ಪಂಜಾಬ್ ಕಿಂಗ್ಸ್ಗೆ 13 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಕೂಡ ಖಾಲಿ ಕೈಯಲ್ಲಿ ಹಿಂತಿರುಗುವುದಿಲ್ಲ. ಪ್ಲೇ-ಆಫ್‌ಗೆ ಪ್ರವೇಶ ಹಿನ್ನೆಲೆಯಲ್ಲಿ ಕ್ರಮವಾಗಿ 7 ಕೋಟಿ ಮತ್ತು 6.5 ಕೋಟಿ ರೂಪಾಯಿ ಹಣ ಪಡೆದಿವೆ.
ಇದನ್ನೂ ಓದಿ : ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿಗೆ ಸಿಕ್ಕಿದ್ದು ಎಷ್ಟು ಕೋಟಿ? ಪಂಜಾಬ್ ಪಾಲಾಗಿದ್ದು ಎಷ್ಟು?
