‘ಕಲರ್ಸ್‌ ದೊಡ್ಮನೆ ಹಬ್ಬ’ದ ಮೆರುಗು – ಫೆ.14ಕ್ಕೆ ಬಿಗ್​ಬಾಸ್ ಸ್ಪರ್ಧಿಗಳಿಂದ ಮನರಂಜನೆಯ ಮಹಾಪೂರ!

ಕನ್ನಡಿಗರ ನೆಚ್ಚಿನ ಮನರಂಜನಾ ವಾಹಿನಿ ‘ಕಲರ್ಸ್‌ ಕನ್ನಡ’ ಸದಾ ನವನವೀನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ಸೆಳೆಯುತ್ತಲೇ ಇರುತ್ತದೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರವರಿ 14ರಂದು “ಕಲರ್ಸ್‌ ದೊಡ್ಮನೆ ಹಬ್ಬ” ಎಂಬ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಕನ್ನಡ ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ. ಶನಿವಾರದಂದು (ಫೆ.14) ಕರುನಾಡಿನ ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಅತ್ಯುತ್ತಮ ಕಾರ್ಯಕ್ರಮ ಇದಾಗಲಿದೆ. ಅಂದಹಾಗೆ, ಈ “ಕಲರ್ಸ್‌ ದೊಡ್ಮನೆ ಹಬ್ಬ” ಇದೇ ಶನಿವಾರ ಸಂಜೆ 6:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್‌ 12ರ ಎಲ್ಲಾ ಸ್ಪರ್ಧಿಗಳು ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆಯೊಳಗಿನ ಗಂಭೀರ ವಾತಾವರಣದ ಬದಲು ಇಲ್ಲಿ ಕೇವಲ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ನಕ್ಕು ನಗಿಸುವ ಸಾಕಷ್ಟು ಝಲಕ್‌ಗಳು ಈ “ಕಲರ್ಸ್‌ ದೊಡ್ಮನೆ ಹಬ್ಬ”ದ ಹೈಲೈಟ್‌.

ಭಾಗ್ಯಲಕ್ಷ್ಮೀ ಸೀರಿಯಲ್‌ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ತಮ್ಮ ಎಂದಿನ ಲವಲವಿಕೆಯಿಂದ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳ ಗುಟ್ಟುಗಳನ್ನು ಹೊರಹಾಕುವಲ್ಲಿ ಸುಷ್ಮಾ ಅವರ ಚಾತುರ್ಯ ಇಲ್ಲಿ ಹೈಲೈಟ್. ಕಾರ್ಯಕ್ರಮದಲ್ಲಿ ಕೇವಲ ಹಾಡು-ಕುಣಿತ ಅಷ್ಟೇ ಅಲ್ಲದೆ, ಬಿಗ್ ಬಾಸ್ ಮನೆಯ ಟಾಸ್ಕ್‌ಗಳನ್ನು ನೆನಪಿಸುವಂತಹ ತಮಾಷೆಯ ಗೇಮ್‌ಗಳನ್ನು ಸುಷ್ಮಾ ಅವರು ಆಡಿಸಿ ರಂಜಿಸಿದ್ದಾರೆ. ಇದು ಸ್ಪರ್ಧಿಗಳ ನಡುವಿನ ಹಳೆಯ ಕಾಲೆಳೆಯುವ ಗುಣವನ್ನು ಮತ್ತೆ ನೆನಪಿಸಲಿದೆ.

ಈ ಬಾರಿಯ ಬಿಗ್ ಬಾಸ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದವರೆಂದರೆ ಅದು ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟ. ಇದೀಗ ಇದೇ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಗಿಲ್ಲಿ ಅಭಿಮಾನಿಗಳಿಗಾಗಿಯೇ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಬಿಗ್‌ ಬಾಸ್‌ ಜರ್ನಿಯನ್ನು ಸಂಭ್ರಮಿಸುವ ಜೊತೆಗೆ, ಫ್ಯಾನ್ಸ್‌ ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಬಿಗ್ ಬಾಸ್‌ ಸೀಸನ್‌ 12ರ ಸ್ಪರ್ಧಿಗಳು ವೇದಿಕೆ ಮೇಲೆ ತಮ್ಮಿಷ್ಟದ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಬಿಗ್‌ ಬಾಸ್‌ ದಿನಗಳನ್ನು ಮೆಲುಕು ಹಾಕಿದ್ದಾರೆ. ಹೊರ ಬಂದ ಮೇಲೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನೂ ಹೇಳಿಕೊಂಡಿದ್ದಾರೆ. ಇದೆಲ್ಲ ಮನರಂಜನೆಯ ರಸದೌತಣವನ್ನು ಸವಿಯಲು ಕಲರ್ಸ್‌ ದೊಡ್ಮನೆ ಹಬ್ಬ ಕಾರ್ಯಕ್ರಮವನ್ನು ಮಿಸ್‌ ಮಾಡಲೇಬೇಡಿ. ಇದೇ ಫೆಬ್ರವರಿ 14ರ ಸಂಜೆ 6 ಗಂಟೆಗೆ ಮೂರು ಗಂಟೆಗಳ ಮನರಂಜನೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡದಲ್ಲಿ.

Btv Kannada
Author: Btv Kannada

Read More