ಬೆಂಗಳೂರು : ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 111 ವ್ಯಾಪ್ತಿಯಲ್ಲಿ, ರಸ್ತೆ ಬದಿಯಲ್ಲಿ ಅನುಮತಿ ಇಲ್ಲದೆ ಮರವನ್ನು ಬುಡಸಮೇತ ಕಿತ್ತು ಹಾಕಿದ ಆರೋಪದ ಮೇಲೆ ಸಾರ್ಬೆರಿ ಕಂಪನಿಯ ಸಿಇಒ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಕೃತ್ಯವು ಕರ್ನಾಟಕ ವೃಕ್ಷ ಸಂರಕ್ಷಣಾ ಅಧಿನಿಯಮ 1976 ರ ಸೆಕ್ಷನ್ 8 ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಬಿಎಂಪಿ ಪೂರ್ವ ವಲಯದ ವ್ಯಾಪ್ತಿಗೆ ಬರುವ ರೆಸಿಡೆನ್ಸಿ ರಸ್ತೆಯಲ್ಲಿ ಈ ಅಕ್ರಮ ಮರ ಕಡಿತ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿದ್ದ ಒಂದು ಸಾಲಿನ ಪುಷ್ಪ ಮರವನ್ನು ಯಾವುದೇ ಪೂರ್ವಾನುಮತಿ ಪಡೆಯದೆ ಬುಡಸಮೇತವಾಗಿ ಕಿತ್ತು ಹಾಕಲಾಗಿದೆ. ಈ ಮರದ ಬುಡದ ಸುತ್ತಳತೆ ಮತ್ತು ಕ್ರಮ ಸಂಖ್ಯೆಗಳನ್ನು ಸಹ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ಪರಿಸರವಾದಿಗಳು ಮತ್ತು ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾದ ನಂತರ, ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರವನ್ನು ಅಕ್ರಮವಾಗಿ ಕತ್ತರಿಸಲಾಗಿದೆ ಎಂಬುದು ದೃಢಪಟ್ಟ ನಂತರ, ಈ ಕೃತ್ಯಕ್ಕೆ ಕಾರಣರಾದ ಸಾರ್ಬೆರಿ ಕಂಪನಿಯ ಸಿಇಒ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಹೆತ್ತ ತಂದೆಯಿಂದಲೇ 13 ವರ್ಷದ ಮಗಳ ಮೇಲೆ ಅತ್ಯಾಚಾರ!







