ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಶ್ರೀಗಳ ಪಾಲಿಗೆ ಇಂದು ಬಿಗ್ ಡೇ ಆಗಿದೆ. ಶ್ರೀಗಳ ವಿರುದ್ಧದ ಫೋಕ್ಸೋ ಕೇಸ್ನ ತೀರ್ಪು ಇನ್ನು ಕೆಲವೇ ಹೊತ್ತಲ್ಲಿ ಹೊರ ಬೀಳಲಿದೆ. ಮಧ್ಯಾಹ್ನ 2.45ಕ್ಕೆ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಲಿದೆ.
ನ್ಯಾಯಾಧೀಶರಾದ ಗಂಗಾಧರಪ್ಪ ಹಡಪದ ಅವರಿಂದ ಮಹತ್ವದ ತೀರ್ಪು ಹೊರ ಬೀಳಲಿದೆ. ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳು ದೋಷಿಯೋ..? ನಿರ್ದೋಷಿಯೋ ? ಅನ್ನೋದು ಮಧ್ಯಾಹ್ನ 2.45ಕ್ಕೆ ನಿರ್ಧಾರ ಆಗಲಿದೆ.
ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿ ಕೇಸ್ನ ವಿಚಾರಣೆ ನಡೆದಿತ್ತು. ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪದ ತೀರ್ಪು ಪ್ರಕಟಿಸಲಿದ್ದಾರೆ. ಈಗಾಗಲೇ ದಾವಣಗೆರೆ ವಿರಕ್ತ ಮಠದಿಂದ ಶ್ರೀಗಳು ನೇರವಾಗಿ ಕೋರ್ಟ್ ಗೆ ಆಗಮಿಸಿದ್ದಾರೆ. ಈ ಪ್ರಕರಣದಲ್ಲಿ A-1 ಮುರುಘಾ ಶ್ರೀ, A-2 ವಾರ್ಡನ್ ರಶ್ಮಿ, A-3 ಪರಮಶಿವಯ್ಯ ಆರೋಪಿಗಳಾಗಿದ್ದಾರೆ. ಮೊದಲ ಕೇಸ್ ನಲ್ಲಿ ಎರಡು ಪ್ರತ್ಯೇಕ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಇದೀಗ ಮುರುಘಾ ಶ್ರೀಗಳ ಸಾವಿರಾರು ಭಕ್ತರ ಚಿತ್ತ ಕೋರ್ಟ್ ತೀರ್ಪಿನತ್ತ ನೆಟ್ಟಿದೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು!







