‘ಕುರ್ಚಿ ಕದನ’ದ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಮನೆ ದೇವರಿಗೆ ವಿಶೇಷ ಪೂಜೆ!

ಕನಕಪುರ : ರಾಜ್ಯ ರಾಜಕೀಯದಲ್ಲಿ ಸಿಎಂ ಹುದ್ದೆಯ ‘ಕುರ್ಚಿ ಕದನ’ ಚರ್ಚೆಯ ನಡುವೆಯೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರದ ತಮ್ಮ ಮನೆ ದೇವರು ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮತದಾನ ಮುಗಿದ ಬಳಿಕ ಡಿಕೆಶಿ ತಮ್ಮ ಕ್ಷೇತ್ರದ ಕಾರ್ಯಕರ್ತರೊಂದಿಗೆ ಕನಕಪುರ ಟೌನ್‌ನಲ್ಲಿರುವ ಕೆಂಕೇರಮ್ಮ ದೇವಾಲಯಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಡಿಕೆಶಿ ಅವರು ಕೆಂಕೇರಮ್ಮ ದೇವಿಗೆ ಸಾಂಪ್ರದಾಯಿಕವಾಗಿ ಈಡುಗಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿದರು. ಪೂಜೆಯ ನಂತರ, ಡಿಕೆಶಿ ಅವರು ದೇವಾಲಯದ ಆವರಣದಲ್ಲಿಯೇ ಕುಳಿತು ತಮ್ಮೊಂದಿಗೆ ಬಂದಿದ್ದ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಕೆಲ ಕಾರ್ಯಕರ್ತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಯತ್ನಿಸಿದರು.

ಡಿಕೆಶಿ ಅವರು ದೇವಸ್ಥಾನದಲ್ಲಿ ಇರುವಾಗಲೇ, ನೆರೆದಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರು “ಮುಂದಿನ‌ ಸಿಎಂ ಡಿ.ಕೆ. ಶಿವಕುಮಾರ್” ಎಂದು ಜೋರಾಗಿ ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ : ನಾಯಕತ್ವ ಬದಲಾವಣೆ ವಿಚಾರ ಐದಾರು ಜನರ ಗುಟ್ಟಿನ ವ್ಯಾಪಾರ – ಸಿಎಂ ಕುರ್ಚಿ ದಂಗಲ್ ವಿಚಾರಕ್ಕೆ ಡಿಕೆಶಿ ಸೈಲೆಂಟ್ ಕೌಂಟರ್!

Btv Kannada
Author: Btv Kannada

Read More