ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ – ತನಿಖೆಯಲ್ಲಿ ಸ್ಪೋಟಕ ವಿಚಾರಗಳು ಬಯಲು!

ಬೆಂಗಳೂರು : ಡಾ. ಕೃತಿಕಾ ರೆಡ್ಡಿ ಕೊಲೆ ಕೇಸ್ ಬೆಂಗಳೂರನ್ನೇ ಬೆಚ್ಚಿ ಬೀಳೀಸಿತ್ತು. ಇದೀಗ ಪತಿಯಿಂದಲೇ ವೈದ್ಯೆ ಡಾ. ಕೃತಿಕಾ ರೆಡ್ಡಿ ಕೊಲೆಯಾದ ಪ್ರಕರಣದ ಸ್ಪೋಟಕ ವಿಚಾರಗಳು ಬಯಲಾಗಿದೆ.

FSL ತನಿಖೆಯಲ್ಲಿ ಮಹೇಂದ್ರ ಮಾಡಿದ್ದ ರೋಚಕ ಚಾಟಿಂಗ್ ಹಿಸ್ಟರಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿ ಡಾ.ಮಹೇಂದ್ರ ರೆಡ್ಡಿ ಫೋನ್, ಲ್ಯಾಪ್‌ಟಾಪ್ ಪರಿಶೀಲನೆ ಮಾಡಿದ್ದು, ಈ ವೇಳೆ ದ್ಯ ಮಹೇಂದ್ರ ರೆಡ್ಡಿ ತನ್ನ ಆಪ್ತ ಸ್ನೇಹಿತೆ ಜೊತೆ ಚಾಟಿಂಗ್​ನಲ್ಲಿದ್ದ ವಿಚಾರ ತಿಳಿದಿದೆ. ಆದರೆ ಮಹೇಂದ್ರ ರೆಡ್ಡಿ ಪದೇ ಪದೇ ಚಾಟಿಂಗ್ ಮಾಡ್ತಿದ್ದಕ್ಕೆ ಬೇಸರಗೊಂಡು ಆತನ ಸ್ನೇಹಿತೆ ವಾಟ್ಸಪ್ ಬ್ಲಾಕ್ ಮಾಡಿದ್ದಳು.

ಬ್ಲಾಕ್ ಮಾಡಿದ್ರೂ ಮಹೇಂದ್ರ ರೆಡ್ಡಿ ಅನ್ಯ ಮಾರ್ಗದಲ್ಲಿ ಚಾಟಿಂಗ್ ಮಾಡಿದ್ದ. ಫೋನ್ ಪೇಯಲ್ಲಿ ಚಾಟ್ ಮಾಡಿದ್ದ, ಪೊಲೀಸರ ತನಿಖೆ ವೇಳೆ ವೈಯಕ್ತಿಕ ವಿಚಾರಗಳ ಬಗ್ಗೆ ಚಾಟಿಂಗ್ ಮಾಡಿರೋದು ಬೆಳಕಿಗೆ ಬಂದಿದೆ. ಮಾರತ್ತಹಳ್ಳಿ ಪೊಲೀಸರು ಇಡೀ ಚಾಟಿಂಗ್ ಹಿಸ್ಟರಿ ಹೊರತೆಗೆದಿದ್ದು, ಪೊಲೀಸರು ವೈದ್ಯೆ ಕೊಲೆ ಕೇಸ್ ತನಿಖೆ ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ : ಗಿಲ್ಲಿ ಮೇಲೆ ಹಲ್ಲೆ ಮಾಡಿ ರಿಷಾ ಕೂಗಾಟ – ಬಿಗ್​ಬಾಸ್ ಮನೆಯಿಂದ ರಿಷಾ ಹೊರಕ್ಕೆ?

Btv Kannada
Author: Btv Kannada

Read More