‘ಲವ್ ಮಾಡು.. ಇಲ್ಲ ಅಂದ್ರೆ ಮಕ್ಕಳನ್ನು ಕೊಲ್ಲುವೆ’ – ಗೃಹಿಣಿಗೆ ಪಾಗಲ್ ಪ್ರೇಮಿಯಿಂದ ಟಾರ್ಚರ್!

ಬೆಂಗಳೂರು : ಬೆಂಗಳೂರು ನಗರದಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ಪಾಗಲ್ ಪ್ರೇಮಿಯೊಬ್ಬ ಪದೇ ಪದೇ ಪ್ರೀತಿ ಮಾಡುವಂತೆ ಟಾರ್ಚರ್ ನೀಡಿ, ಬೆದರಿಕೆ ಮತ್ತು ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಸಂತೋಷ್ ರೆಡ್ಡಿ ಎಂಬಾತನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಗೃಹಿಣಿ ದೂರು ದಾಖಲಿಸಿದ್ದಾರೆ.

ಸಂತೋಷ್ ರೆಡ್ಡಿ ಎಂಬಾತ ತನ್ನ ಕಸಿನ್ ಮದುವೆಗೆ ಕುರ್ತಾ ಡಿಸೈನ್ ಮಾಡಿಕೊಡಿ ಎಂದು ಫ್ಯಾಷನ್ ಡಿಸೈನರ್ ಆಗಿರುವ ಗೃಹಿಣಿಯನ್ನು ಪರಿಚಯ ಮಾಡಿಕೊಂಡಿದ್ದ. ಆರಂಭದಲ್ಲಿ ಇದೊಂದು ವೃತ್ತಿಪರ ಪರಿಚಯವಾಗಿತ್ತು. ಈ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿದ್ದು, ಸಂತೋಷ್ ರೆಡ್ಡಿ ಕಾಲಕ್ರಮೇಣ ಮಹಿಳೆಯ ಕುಟುಂಬದ ಸ್ನೇಹಿತನಂತೆಯೇ ಕ್ಲೋಸ್ ಆಗಿದ್ದ. ಇದಲ್ಲದೆ, ಮಹಿಳೆಯ ಕಂಪನಿಗೆ ‘ಇನ್ವೆಸ್ಟ್ ಮಾಡ್ತೀನಿ’ ಎಂದು ಹೇಳಿ ಮತ್ತಷ್ಟು ಆಪ್ತನಾಗಿದ್ದ ಸಂತೋಷ್ ರೆಡ್ಡಿ, ಇದನ್ನೇ ದುರುಪಯೋಗಪಡಿಸಿಕೊಂಡು ಮಹಿಳೆಯ ಮೇಲೆ ಪ್ರೀತಿಗೆ ಒತ್ತಡ ಹಾಕಲು ಆರಂಭಿಸಿದ್ದಾನೆ.

ಮಹಿಳೆ ಈತನ ಪ್ರೀತಿಯನ್ನು ನಿರಾಕರಿಸಿದಾಗ, ಆತ ತನ್ನ ನಿಜಬಣ್ಣವನ್ನು ತೋರಿಸಿದ್ದಾನೆ. “ನೀನು ಲವ್ ಮಾಡು, ಲವ್ ಮಾಡು” ಎಂದು ಪದೇ ಪದೇ ಗೋಗರೆದಿದ್ದಾನೆ. ಮಹಿಳೆ ಒಪ್ಪದಿದ್ದಾಗ, “ಲವ್ ಮಾಡಿಲ್ಲ ಅಂದ್ರೆ ನಿನ್ನಿಬ್ಬರು ಮಕ್ಕಳನ್ನು ಕೊಲ್ಲುತ್ತೇನೆ” ಎಂದು ತೀವ್ರವಾಗಿ ಬೆದರಿಕೆ ಹಾಕಿದ್ದಾನೆ.

ಬೆದರಿಕೆ ಮಾತ್ರವಲ್ಲದೆ, “ಪ್ರೀತಿಸು” ಎಂದು ಮಹಿಳೆಯ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ. ಈತ ಅಂಕಲ್ ವಯಸ್ಸಿನವನಾಗಿದ್ದರೂ ಸಹ ಈ ರೀತಿ ಪಾಗಲ್ ಪ್ರೇಮಿಯಂತೆ ವರ್ತಿಸಿ ಮಹಿಳೆಯ ಮೇಲೆ ದೈಹಿಕ ಹಲ್ಲೆ ಮಾಡಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.

ಈ ಟಾರ್ಚರ್ ಮತ್ತು ಬೆದರಿಕೆಯಿಂದ ಬೇಸತ್ತ ಗೃಹಿಣಿ ಅಂತಿಮವಾಗಿ ಸಂತೋಷ್ ರೆಡ್ಡಿ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಆರ್‌ಎಸ್‌ಎಸ್ ಪಥಸಂಚಲನ ನಿಲ್ಲಿಸಲು ಆಗುತ್ತಾ: ಸರ್ಕಾರದ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು; ಜಾತಿಗಣತಿ ಬಗ್ಗೆ ತೀವ್ರ ಆಕ್ರೋಶ!

Btv Kannada
Author: Btv Kannada

Read More