ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಏಳು ಜನರಿದ್ದ ತಂಡವೊಂದು ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಸಂತ್ರಸ್ತಯ ಮನೆಗೆ ನುಗ್ಗಿ ಒಟ್ಟು ಏಳು ಜನ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಂಸುವಲ್ಲಿ ಯಸಸ್ವಿಯಾಗಿದ್ದಾರೆ ಬಂಧಿತ ಆರೋಪಿಗಳು ನವೀನ್, ಕಾರ್ತಿಕ್, ಶುಯೋಗ್, ಸೀನ, ಜಂಗ್ಲಿ ಮತ್ತು ಪೃಥ್ವಿ ಎಂದು ಗುರುತಿಸಲಾಗಿದೆ.

ಪ್ರಕರಣದ ಎ1 ಆರೋಪಿ ಮಿಥುನ್ ಸದ್ಯಕ್ಕೆ ತಲೆ ಮರೆಸಿಕೊಂಡಿದ್ದಾನೆ. ಮಾದನಾಯಕನಹಳ್ಳಿ ಪೊಲೀಸರು ತಲೆ ಮರೆಸಿಕೊಂಡಿರುವ ಎ1 ಆರೋಪಿ ಮಿಥುನ್‌ಗಾಗಿ ತೀವ್ರ ಜಾಲ ಬೀಸಿದ್ದಾರೆ. ಎ1 ಆರೋಪಿ ಮಿಥುನ್ ಬಂಧನಕ್ಕೆ ಪೊಲೀಸರು ತೀವ್ರ ಕಾರ್ಯಾಚರಣೆಯಲ್ಲಿದ್ದಾರೆ.


ಇದನ್ನು ಓದಿ : ಜಾಲಿವುಡ್ ಸ್ಟುಡಿಯೋಸ್ನಿಂದ ಪರಿಸರ ನಿಯಮ ಉಲ್ಲಂಘನೆ – ಪಿ.ಎಂ ನರೇಂದ್ರಸ್ವಾಮಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು!







