ಬೀದಿ ಬದಿ ವ್ಯಾಪಾರಿಗಳ ಮೇಲೆ ಪೊಲೀಸಪ್ಪನ ದರ್ಪ- ಮನಬಂದಂತೆ ಸಾಮಗ್ರಿಗಳನ್ನು ಕಿತ್ತೆಸೆದ ASI ಕುಂಡ್ಲಿಕಪ್ಪ!

ಕೊಪ್ಪಳ : ಬೀದಿ ಬದಿ ವ್ಯಾಪಾರಿಗಳ ಮೇಲೆ ಪೊಲೀಸಪ್ಪ ದರ್ಪ ತೋರಿರುವ ಘಟನೆ ಕುಷ್ಟಗಿ ನಗರದ ಸಂತೆ ಬಜಾರ್ ವಾಲ್ಮೀಕಿ ಸರ್ಕಲ್​ನಲ್ಲಿ ನಡೆದಿದೆ. ASI ಕುಂಡ್ಲಿಕಪ್ಪ ವ್ಯಾಪಾರಿಗಳ ಸಾಮಗ್ರಿಗಳನ್ನು ಮನಬಂದಂತೆ ಕಿತ್ತೆಸೆದಿದ್ದಾನೆ.

ದೀಪಾವಳಿ ಹಿನ್ನಲೆ ಇಂದು ಸಂತೆ ಬಜಾರ್​ನಲ್ಲಿ ಜನಜಂಗುಳಿ ಇತ್ತು. ಪ್ರತಿ ರವಿವಾರ ಸಂತೆ ವೇಳೆ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡ್ತಿದ್ದರು. ಇಂದು ರಸ್ತೆಯ ಬದಿಯಲ್ಲಿ ಹಾಗೂ ಡಿವೈಡರ್ ಮೇಲೆ ವ್ಯಾಪಾರ ಮಾಡ್ತಿದ್ದವರ ಮೇಲೆ ಕುಷ್ಟಗಿ ಪೊಲೀಸ್ ಠಾಣೆಯ ASI ಕುಂಡ್ಲಿಕಪ್ಪ ದರ್ಪ ಮೆರೆದಿದ್ದಾನೆ. ವ್ಯಾಪಾರಿಗಳ ಬಳಿ ಹೋಗಿ ಮನಬಂದಂತೆ ಸಾಮಗ್ರಿಗಳನ್ನು ಕಿತ್ತೆಸೆದು ಪೊಲೀಸಪ್ಪ ಅಮಾನವೀಯವಾಗಿ ವರ್ತಿಸಿದ್ದಾನೆ.

ಅಮಾನವೀಯವಾಗಿ ನಡೆದುಕೊಂಡ ಪೊಲೀಸಪ್ಪನ ನಡವಳಿಕೆಯನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ವ್ಯಾಪಾರಿಗಳು ಬೇಡಿಕೊಂಡರು ಬೀಡದೆ ASI ಕುಂಡ್ಲಿಕಪ್ಪ ಸಾಮಾನುಗಳನ್ನು ಎಸೆದಿದ್ದು, ಪೊಲೀಸಪ್ಪನ ದರ್ಪಕ್ಕೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.

ವ್ಯಾಪಾರಸ್ಥರಿಗೆ ತಿಳಿಸಿ ಹೇಳಿದ್ರೆ ಸಾಕಾಗ್ತಿತ್ತು, ಮನಸ್ಸೊ ಇಚ್ಚೆ ಬಂದಂತೆ ಸಾಮಗ್ರಿಗಳನ್ನು ಬಿಸಾಡೋದು ಬೇಕಿತ್ತಾ? ಪೊಲೀಸಪ್ಪನ ಈ ನಡೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ‘ಗುರು’ವಿಗೆ ತಿರುಮಂತ್ರ ಹಾಕ್ತಾರಾ ನ್ಯಾಷನಲ್​ ಕ್ರಶ್.. ಕಾಂತಾರಾ-1 ಓಟಕ್ಕೆ ರಶ್ಮಿಕಾ ಮಂದಣ್ಣ ಸಿನಿಮಾ ಬ್ರೇಕ್?!

Btv Kannada
Author: Btv Kannada

Read More