ಬೆಂಗಳೂರು : ರಿಯಲ್ ಎಸ್ಟೇಟ್ ವಂಚಕರು ACP ಪೂರ್ಣಚಂದ್ರ ತೇಜಸ್ವಿ ಅವರಿಗೆ 30 ಲಕ್ಷ ಪಂಗನಾಮ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಪೂರ್ಣಚಂದ್ರ ತೇಜಸ್ವಿ ಅವರು ಈ ಹಿಂದೆ ಬೆಂಗಳೂರು ಹಾಗೂ ಮೈಸೂರಲ್ಲಿ ಎಸಿಪಿಯಾಗಿ ಕೆಲಸವನ್ನ ನಿರ್ವಹಿಸಿದ್ದರು, ಕಳೆದ ಎರಡ್ಮೂರು ವರ್ಷದ ಹಿಂದೆ ACP ಪೂರ್ಣಚಂದ್ರರವರು ಸೈಟ್ ಪರ್ಚೇಸ್ಗೆ ಓಡಾಡ್ತಿದ್ರು. ಈ ವೇಳೆ ಚಿಕ್ಕೇಗೌಡ ಎಂಬಾತನ ಪರಿಚಯವಾಗಿತ್ತು.

ಚಿಕ್ಕೇಗೌಡನ ಬಳಿ ACP ಪೂರ್ಣಚಂದ್ರ ತೇಜಸ್ವಿ ಅವರು ಸೈಟ್ ಕೊಡಿಸುವಂತೆ ಕೇಳಿದ್ದರು. ನಂತರ ACP ಪೂರ್ಣಚಂದ್ರ ಅವರು ಚಿಕ್ಕೇಗೌಡನಿಗೆ 30 ಲಕ್ಷ ಹಣವನ್ನ ಮುಂಗಡವಾಗಿ ನೀಡಿದ್ದರು. ಚಿಕ್ಕೇಗೌಡ ಬಿಲ್ಡರ್ ಉಮೇಶನ ಬಳಿ ಸೈಟ್ ಕೊಡಿಸುವಂತೆ ಹೇಳಿ ಆತನಿಗೆ 30 ಲಕ್ಷ ಟ್ರಾನ್ಫರ್ ಮಾಡಿದ್ದರು. ಅದರಂತೆ ಉಮೇಶ ಬನಶಂಕರಿಯ ಬಳಿಯ ವಿ ಪ್ರಾಜೆಕ್ಟ್ನ ಸೈಟ್ ತೋರಿಸಿದ್ದ. ಬಳಿಕ 50*30 ರ ಡೈಮೆನ್ಷನ್ ಸೈಟ್ನ್ನು ಅಗ್ರಿಮೆಂಟ್ ಹಾಕಿಸೋ ಕೆಲಸ ಕೂಡ ಆಗಿತ್ತು. ಆದ್ರೆ, ಸೈಟ್ ರಿಜಿಸ್ಟ್ರೇಷನ್ ಮಾತ್ರ ಇಷ್ಟು ವರ್ಷವಾದ್ರೂ ಆಗಿರ್ಲಿಲ್ಲ.
ಇದರಿಂದ ACP ಪೂರ್ಣಚಂದ್ರ ಸಿಡಿಮಿಡಿಗೊಂಡಿದ್ದರು. ಚಿಕ್ಕೇಗೌಡನನ್ನ ವಿಜಯನಗರ ಕ್ಲಬ್ಗೆ ಕರೆಸಿ ಸೈಟ್ ಕೊಡ್ಸು ಇಲ್ವೇ ಹಣ ವಾಪಾಸ್ಸು ಕೊಡ್ಸು ಅಂತ ಕೇಳ್ತಾರೆ. ಇದೇ ವೇಳೆ ಕ್ಲಬ್ಗೆ ಉಮೇಶ ಕೂಡ ಎಂಟ್ರಿ ಕೊಡ್ತಾನೆ, ಉಮೇಶನ ಬಳಿಯೂ ACP ಪೂರ್ಣಚಂದ್ರ ಹಣಕೊಟ್ಟು ಮೂರು ವರ್ಷ ಆಯ್ತು ಹೆಚ್ಚಿಗೆ ಸೇರಿಸಿ ಕೊಟ್ಬಿಡಿ ಎಂದಿದ್ದಾರೆ. ಅಷ್ಟಕ್ಕೆ ಸಿಟ್ಟಾದ ಉಮೇಶ ಹಾಗೂ ಆತನ ಜೊತೆಗಿದ್ದ ಸುನೀಲ, ಚಿಕ್ಕಗೌಡನನ್ನ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕ್ಲಬ್ನಿಂದ ಹೊರಬಂದಾಗ್ಲೂ ಉಮೇಶ ಚಿಕ್ಕೇಗೌಡನಿಗೆ ಬೆದರಿಕೆ ಹಾಕಿದ್ದಾನೆ.

ತಾನು ರೌಡಿ ಗಣೇಶ @ ಕಾಲಾಪತ್ತರ್ನ ಸಹಚರ ಲೋಕಲ್ ಹುಡುಗ್ರ ಬಳಿ ಚಾಕೂನ ಚುಚ್ಚಿಸಿಬಿಡ್ತೀನಿ ಅಂತ ಉಮೇಶ, ಚಿಕ್ಕೇಗೌಡನಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆ ಆಗ್ತಿದ್ದಂತೆ ಹೆದರಿದ ಚಿಕ್ಕೇಗೌಡ ಕಾರನ್ನು ಬಸವೇಶ್ವರ ನಗರದ ಬಳಿ ಬಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡ್ಕೊಳ್ತಾನೆ. ನಂತರ ಚಿಕ್ಕೇಗೌಡ ಮನೆಗೆ ಬಂದಿಲ್ಲ ಅಂತ ಹೆದರಿದ ಆತನ ಹೆಂಡ್ತಿ ಲಕ್ಷ್ಮಿ ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದಾರೆ. ಸಂಜೆ ಹೊತ್ತಿಗೆ ಚಿಕ್ಕೇಗೌಡ ಪತ್ತೆಯಾಗಿದ್ದು, ಬಳಿಕ ವಿಜಯನಗರ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾನೆ. ಚಿಕ್ಕೇಗೌಡ ದೂರಿನ ಆಧಾರದ ಮೇಲೆ ವಿಜಯನಗರ ಠಾಣೆಯಲ್ಲಿ ಉಮೇಶ ಹಾಗೂ ಸುನೀಲನ ಮೇಲೆ FIR ದಾಖಲಾಗಿದೆ. ಪೊಲೀಸರು ಇಬ್ಬರನ್ನೂ ಹುಡುಕಾಡೋ ಕೆಲಸವನ್ನ ಮಾಡ್ತಿದ್ದು, ಇತ್ತ ACP ಸೈಟಿನ ಆಸೆಗೆ ಹಣಕೊಟ್ಟು ಇದೀಗ ಬಾಯಿಬಾಯಿ ಬಡ್ಕೊಳ್ತಿದ್ದಾರೆ.


ಇದನ್ನೂ ಓದಿ : ‘ದಿಗ್ಲುಪುರ’ ಚಿತ್ರದ ಮುಹೂರ್ತ – ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸಾಥ್!







