ಈ ವಾರದ ನ್ಯೂಸ್ ಚಾನೆಲ್ TRP ಬಿಡುಗಡೆ.. NEWS-18 ಕನ್ನಡ ಸುದ್ದಿ ವಾಹಿನಿ ನಂಬರ್​-1

ಬೆಂಗಳೂರು : ಬಾರ್ಕ್​ ಸಂಸ್ಥೆ ನೀಡುವ ಈ ವಾರದ ನ್ಯೂಸ್ ಚಾನೆಲ್ TRP ಬಿಡುಗಡೆ ಆಗಿದೆ. WEEK 40-ನಲ್ಲಿ ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ( RURAL SECTOR) NEWS-18 ಕನ್ನಡ ಸುದ್ದಿ ವಾಹಿನಿ ನಂಬರ್​-1 ಸ್ಥಾನದಲ್ಲಿದ್ದು 77 ರೇಟಿಂಗ್ ಪಾಯಿಂಟ್ ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ.

ಕರ್ನಾಟಕ ರಾಜ್ಯದ ನ್ಯೂಸ್ ಚಾನೆಲ್​ಗಳ 40ನೇ ವಾರದ TRP ರಿಲೀಸ್ ಆಗಿದೆ. ಗ್ರಾಮೀಣ ಭಾಗಗಳಲ್ಲಿ NEWS-18 ಮೊದಲ ಸ್ಥಾನದಲ್ಲಿದ್ರೆ, TV-9 ಕನ್ನಡ ಸುದ್ದಿ ವಾಹಿನಿ 71 ರೇಟಿಂಗ್ ಪಾಯಿಂಟ್ ಪಡೆದು 2ನೇ ಸ್ಥಾನದಲ್ಲಿದೆ. ಪಬ್ಲಿಕ್ ಟಿವಿ ಚಾನೆಲ್​ 56 ರೇಟಿಂಗ್​ನೊಂದಿಗೆ 3ನೇ ಸ್ಥಾನ ಪಡೆದಿದ್ದು, ಸುವರ್ಣ ನ್ಯೂಸ್ 31 ರೇಟಿಂಗ್​ನೊಂದಿಗೆ 4ನೇ ಸ್ಥಾನ ಪಡೆದಿದೆ. ಇನ್ನು NEWS-1ST ಚಾನೆಲ್ 27 ರೇಟಿಂಗ್ ಪಾಯಿಂಟ್​ ಪಡೆದು 5ನೇ ಸ್ಥಾನದಲ್ಲಿದೆ.


ನಗರ ಪ್ರದೇಶಗಳಲ್ಲಿ TV-9 ಕನ್ನಡ ಸುದ್ದಿ ವಾಹಿನಿ 87 ರೇಟಿಂಗ್ ಪಾಯಿಂಟ್ ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ. NEWS-18 ಚಾನೆಲ್​ 73 ರೇಟಿಂಗ್ ಪಡೆದು 2ನೇ ಸ್ಥಾನ ಪಡೆದುಕೊಂಡಿದೆ. 57 ಪಾಯಿಂಟ್ ಪಡೆದ ಪಬ್ಲಿಕ್ ಟಿವಿಗೆ 3ನೇ ಸ್ಥಾನ, 34 ರೇಟಿಂಗ್ ಪಡೆದ ಸುವರ್ಣ ನ್ಯೂಸ್ ಚಾನೆಲ್​ಗೆ 4ನೇ ಸ್ಥಾನ, 26 ರೇಟಿಂಗ್ ಪಡೆದ NEWS-1ST ಚಾನೆಲ್​ಗೆ 5ನೇ ಸ್ಥಾನ ಲಭಿಸಿದೆ.

ಇನ್ನು ರಾಜಧಾನಿ ಬೆಂಗಳೂರಲ್ಲಿ TV-9 ಕನ್ನಡ ಸುದ್ದಿ ವಾಹಿನಿ 118 ರೇಟಿಂಗ್ ಪಾಯಿಂಟ್ ಪಡೆದು ಮೊದಲ ಸ್ಥಾನದಲ್ಲಿದೆ. 78 ಪಾಯಿಂಟ್ ಪಡೆದ ಪಬ್ಲಿಕ್ ಟಿವಿಗೆ 2ನೇ ಸ್ಥಾನ, NEWS-18 ಚಾನೆಲ್​ 62 ರೇಟಿಂಗ್ ಪಡೆದು 3ನೇ ಸ್ಥಾನ ಪಡೆದುಕೊಂಡಿದೆ. 38 ರೇಟಿಂಗ್ ಪಡೆದ ಸುವರ್ಣ ನ್ಯೂಸ್​​ಗೆ 4ನೇ ಸ್ಥಾನ, 28 ರೇಟಿಂಗ್ ಪಡೆದ NEWS-1ST ಚಾನೆಲ್​ಗೆ 5ನೇ ಸ್ಥಾನ ಲಭಿಸಿದೆ.

ಸುದ್ದಿ ವಾಹಿನಿಗಳು ಜನರಿಗೆ ಅಗತ್ಯವಾದ ಸುದ್ದಿ, ಮಾಹಿತಿ, ಘಟನೆಗಳನ್ನು ತಿಳಿಸುವುದರ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಸುದ್ದಿಯನ್ನು ಆದಷ್ಟು ಬೇಗನೇ ಕೊಡುವುದರ ಮೂಲಕ ಉಳಿದ ನ್ಯೂಸ್ ಚಾನೆಲ್​​ಗಳಿಗಿಂತ ನಮ್ಮ ಚಾನೆಲ್​ ನಂಬರ್​-1 ಎನ್ನುವ ಹಪಾಹಪಿಗೆ ಬಿದ್ದು ಸುದ್ದಿಯನ್ನು ಬಿತ್ತರಿಸುತ್ತವೆ.

ನಮ್ಮಲ್ಲೇ ಮೊದಲು.. ಬಿಗ್​ ಎಕ್ಸ್​ಕ್ಲೂಸಿವ್.. ಬೆಚ್ಚಿ ಬೀಳುವ ಬ್ಲಾಸ್ಟ್ ಸ್ಟೋರಿ.. ಒಂದು ಪಕ್ಷದ ಪರ ಸುದ್ದಿ ಪ್ರಸಾರ, ನಿರ್ದಿಷ್ಟ ಸಮುದಾಯದ ವಿರುದ್ಧ ಎಂತೆಲ್ಲಾ​​ ಸುದ್ದಿ ಪ್ರಸಾರ ಮಾಡ್ತಾರೆ ಆದ್ರೆ ಜನರು ಮಾತ್ರ ನಾವು ಯಾವ ನ್ಯೂಸ್ ಚಾನೆಲ್​ ನೋಡಬೇಕು ಅಥವಾ ಬೇಡ ಎಂಬುದನ್ನು ನಿರ್ಧರಿಸುತ್ತಾರೆ. ಹಾಗಾಗಿ ಈ ವಾರದ ನ್ಯೂಸ್ ಚಾನೆಲ್ TRPಯಲ್ಲಿ ಕರ್ನಾಟಕದ ಗ್ರಾಮಾಂತರ ಭಾಗದಲ್ಲಿ NEWS-18 ಕನ್ನಡ ಸುದ್ದಿ ವಾಹಿನಿ ನಂಬರ್​-1 ಆಗಿದ್ದು ಉಳಿದ ಚಾನೆಲ್​​ಗಳು ಜನರ ಮನಸ್ಸು ಗೆಲ್ಲಲು ಪೈಪೋಟಿಗೆ ಬಿದ್ದಿರೋದಂತು ಸತ್ಯ.

ಇದನ್ನೂ ಓದಿ : CJI ಬಿ.ಆರ್. ಗವಾಯಿ ಮೇಲೆ ಶೂ ಎಸೆದ ಪ್ರಕರಣ – ವಕೀಲ ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಎಜಿ ಒಪ್ಪಿಗೆ!

Btv Kannada
Author: Btv Kannada

Read More