ಕ್ರಿಕೆಟ್ ಬೆಟ್ಟಿಂಗ್ ಕಥಾನಕ ಸಿನಿಮಾ ʻಬ್ರ್ಯಾಟ್ʼ – ಅ.31ಕ್ಕೆ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಚಿತ್ರ ರಿಲೀಸ್!

ನಿರ್ದೇಶಕ ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹಾಗೂ ಮಂಜುನಾಥ್ ಕಂದಕೂರ್ ನಿರ್ಮಾಣದ ʻಬ್ರ್ಯಾಟ್ʼ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿದೆ. ಡಾರ್ಲಿಂಗ್ ಕೃಷ್ಣ ಅವರು ವಿಭಿನ್ನವಾದ ಅವತಾರದಲ್ಲಿ ಬೆಳ್ಳಿತೆರೆಗೆ ಬರೋಕೆ ಸಜ್ಜಾಗಿದ್ದಾರೆ. ಈಗಾಗಲೇ ಈ ಚಿತ್ರದ ʻನಾನೇ ನೀನಂತೆʼ ಸಾಂಗ್​ಗೆ ಪ್ರೇಕ್ಷಕರು ಫಿದಾ ಆಗಿದ್ದು, ಅಕ್ಟೋಬರ್ 31ರಂದು ʻಬ್ರ್ಯಾಟ್ʼ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ರಿಲೀಸ್ ಆಗಲಿದೆ.

ಶಶಾಂಕ್ ನಿರ್ದೇಶನದ ಬ್ರ್ಯಾಟ್ ಚಿತ್ರವು ಕ್ರಿಕೆಟ್ ಬೆಟ್ಟಿಂಗ್ ಕಥೆ ಹೊಂದಿದ್ದು, ಡಾರ್ಲಿಂಗ್ ಕೃಷ್ಣ ಮತ್ತು ಕೌಸಲ್ಯಾ ಸುಪ್ರಜಾ ಜೋಡಿ ಮತ್ತೆ ಒಂದಾಗಿ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆಯಾಗುವ ಈ ಚಿತ್ರವು ದೇಶಾದ್ಯಂತ ಕನೆಕ್ಟ್ ಆಗುವ ರೋಚಕ ಕಥೆಯನ್ನು ಹೇಳುತ್ತದೆ.

“ನಾನೇ ನೀನಂತೆ” ಸಾಂಗ್ 26 ಮಿಲಿಯನ್ ವೀಕ್ಷಣೆಗಳೊಂದಿಗೆ ಟ್ರೆಂಡಿಂಗ್‌ನಲ್ಲಿ ಇದೆ. ಟೀಸರ್ ಮತ್ತು ಗಂಗಿ ಗಂಗಿ ಹಾಡುಗಳು ಒಳ್ಳೆಯ ಪ್ರತಿಕ್ರಿಯೆ ಪಡೆದಿವೆ. ಮನೀಶಾ ನಾಯಕಿಯಾಗಿ, ಅಚ್ಯುತ್ ಕುಮಾರ್ ಮತ್ತು ರಮೇಶ್ ಇಂದಿರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ನೆಲಮಂಗಲದಲ್ಲಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ!

Btv Kannada
Author: Btv Kannada

Read More